ಅಮರನಾಥ ಯಾತ್ರೆಗೆ ತೆರಳಿದ ರಾಜ್ಯದ ನೂರಕ್ಕೂ ಹೆಚ್ಚು ಮಂದಿ ಸುರಕ್ಷಿತ : ಬೊಮ್ಮಾಯಿ.

59
firstsuddi

ಬೆಂಗಳೂರು : ನಮಗೆ ಬಂದ ಮಾಹಿತಿ ಪ್ರಕಾರ ರಾಜ್ಯದ ನೂರಕ್ಕೂ ಹೆಚ್ಚು ಜನ ಅಮರನಾಥ ಯಾತ್ರೆಗೆ ತೆರಳಿದ್ದಾರೆ. ಅವರೆಲ್ಲರೂ ಸುರಕ್ಷಿತವಾಗಿದ್ದಾರೆ. ನಾವು ಅಲ್ಲಿನ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಜತೆ ಸಂಪರ್ಕದಲ್ಲಿ ಇದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಮೇಘಸ್ಫೋಟದಲ್ಲಿ 15 ಜನ ಯಾತ್ರಿಕರು ಸಾವನ್ನಪ್ಪಿದ್ದಾರೆ. ಬೇರೆ ಯಾವುದೇ ಅಹಿತಕರ ಘಟನೆಗಳ ಸುದ್ದಿ ಇಲ್ಲ. ನಾವು ತುರ್ತು ಹೆಲ್ಪ್ ಲೈನ್ ತೆರೆದಿದ್ದೇವೆ. ಹೆಲ್ಪ್ ಲೈನ್ ಗೆ 15-20 ಜನ ಈಗಾಗಲೇ ಕರೆ ಮಾಡಿದ್ದು, ರಕ್ಷಣಾ ಕಾರ್ಯಾಚರಣೆ ಮಾಡ್ತಿದ್ದೇವೆ. ಬಿಎಸ್ ಎಫ್ ಸಿಬ್ಬಂದಿ ಸ್ಥಳದಲ್ಲಿದ್ದಾರೆ. ನಮ್ಮ ಮುಖ್ಯ ಕಾರ್ಯದರ್ಶಿ ಕೇಂದ್ರ ಸರ್ಕಾರದ ಸಂಪರ್ಕದಲ್ಲಿದ್ದಾರೆ. ಏನೇ ಮಾಹಿತಿ, ಸುದ್ದಿ ಇದ್ರೂ ನಮ್ಮ ಹೆಲ್ಪ್ ಲೈನ್ ಗೆ ಕರೆ ಮಾಡಲಿ. ಕೂಡಲೇ ರಕ್ಷಣಾ ಕಾರ್ಯ ಮಾಡ್ತೇವೆ ಎಂದರು.

ಮಳೆ ಹಾನಿ ಬಗ್ಗೆ ನಿನ್ನೆ ಸಭೆ ನಡೆಸಿದ್ದೇನೆ. ಕೆಲವೆಡೆ ಇನ್ನೂ ಎರಡ್ಮೂರು ದಿನ ಮಳೆ ಮುಂದುವರೆಯುವ ಸಾಧ್ಯತೆ ಇದೆ. ಇದಕ್ಕನುಗುಣವಾಗಿ ಕಾರ್ಯಾಚರಣೆ ಮಾಡುತ್ತೇವೆ ಎಂದು ಹೇಳಿದರು.