ವಿದೇಶಕ್ಕೆ ಹಾರಿದ ರಾಹುಲ್ ಗಾಂಧಿ.

61
firstsuddi

ನವದೆಹಲಿ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಇಂದು ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಅಧಿಕೃತ ಮೂಲಗಳು ತಿಳಿಸಿವೆ. ಜುಲೈ 17ರ ಒಳಗೆ ಅವರು ಭಾರತಕ್ಕೆ ಮರಳಲಿದ್ದಾರೆ ಎನ್ನಲಾಗಿದೆ. ಆದರೆ ಸಂಸದ ರಾಹುಲ್ ಗಾಂಧಿ ವಿದೇಶ ಪ್ರಯಾಣದ ಉದ್ದೇಶವನ್ನು ಕಾಂಗ್ರೆಸ್ ಬಿಟ್ಟುಕೊಟ್ಟಿಲ್ಲ.

ಸಂಸದ ರಾಹುಲ್ ಗಾಂಧಿ ವೈಯಕ್ತಿಕ ಭೇಟಿಗಾಗಿ ವಿದೇಶ ಪ್ರವಾಸ ಕೈಗೊಂಡಿದ್ದಾರಾ ಅಥವಾ ಪಕ್ಷದ ಪರವಾಗಿ ಪ್ರವಾಸಕ್ಕೆ ತೆರಳಿದ್ದಾರಾ ಎಂಬ ಮಾಹಿತಿ ಇದುವರೆಗೂ ಹೊರಬಿದ್ದಿಲ್ಲ. ಅಲ್ಲದೇ ಸಂಸದ ರಾಹುಲ್ ಗಾಂಧಿ ಯಾವ ದೇಶಕ್ಕೆ ತೆರಳುತ್ತಿದ್ದಾರೆ ಎಂಬ ಮಾಹಿತಿಯು ತಿಳಿದು ಬಂದಿಲ್ಲ.