12 ವರ್ಷಗಳಲ್ಲಿ 40ಕ್ಕೂ ಹೆಚ್ಚು ಬಾರಿ ಪ್ಲಾಸ್ಟಿಕ್ ಸರ್ಜರಿಗೊಳಗಾದ ಮಾಡೆಲ್!..ಕಾರಣ.

61
firstsuddi

ವಾಷಿಂಗ್ಟನ್ : ಹಾಲಿವುಡ್ ತಾರೆ, ಖ್ಯಾತ ರೂಪದರ್ಶಿ ಕಿಮ್ ಕಾರ್ಡಶಿಯನ್ ಹೋಲುವಂತೆ ಮಾಡೆಲ್ ಒಬ್ಬಳು 12 ವರ್ಷಗಳ ಅವಧಿಯಲ್ಲಿ 40ಕ್ಕೂ ಹೆಚ್ಚು ಬಾರಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾಳೆ. ಇದಕ್ಕಾಗಿ 4.7 ಕೋಟಿ ರೂ. ಖರ್ಚು ಮಾಡಿದ್ದಳು. ವಿಚಿತ್ರ ಅಂದ್ರೆ ಇದೀಗ ಮತ್ತೆ ಅಸಲಿ ರೂಪ ಪಡೆದುಕೊಳ್ಳಲು ಮತ್ತೆ 95,49,660.00 ರೂ. ಖರ್ಚು ಭರಿಸಿದ್ದಾಳೆ. ಈ ಮೂಲಕ ಎಲ್ಲರ ಅಚ್ಚರಿಗೆ ಕಾರಣಳಾಗಿದ್ದಾಳೆ.

ರಿಯಾಲಿಟಿ ಸೂಪರ್ ಸ್ಟಾರ್ ಜೆನ್ನಿಫರ್ ಪ್ಯಾಂಪ್ಲೋನಾ(29) ಎಡವಟ್ಟು ಮಾಡಿಕೊಂಡಿರುವ ಮಾಡೆಲ್. ನಾನು ಅಲ್ಪ – ಸ್ವಲ್ಪ ಕಾರ್ಡಶಿಯನ್ ಅವರನ್ನೇ ಹೋಲುತ್ತಿದ್ದು, ಜನರು ನನ್ನನ್ನು ಕಾರ್ಡಶಿಯನ್ ಎಂದೇ ಕರೆಯುತ್ತಿದ್ದರು. ಆರಂಭದಲ್ಲಿ ಇದು ಖುಷಿ ತರಿಸಿತು. ಆದರೆ, ಕಾಲಕ್ರಮೇಣ ಇದು ನನಗೆ ಕಿರಿಕಿರಿಯುಂಟು ಮಾಡಲು ಪ್ರಾರಂಭಿಸಿತು. ಹಾಗಾಗಿ ಅಸಲಿ ರೂಪ ತಾಳಲು ಮತ್ತೆ ಪ್ಲಾಸ್ಟಿಕ್ ಸರ್ಜರಿಯ ಮೊರೆ ಹೋಗಬೇಕಾಯಿತು ಎಂದು ಜೆನ್ನಿಫರ್ ತಿಳಿಸಿದ್ದಾಳೆ.

ಜೆನ್ನಿಫರ್ ತಾವು 17ನೇ ವಯಸ್ಸಿನಲ್ಲಿ ಇದ್ದಾಗಲೇ ಈ ರೀತಿಯ ಸರ್ಜರಿ ಮಾಡಿಸಿಕೊಳ್ಳುವ ಖಯಾಲಿ ಮಾಡಿಕೊಂಡಿದ್ದರಂತೆ. ಸದ್ಯ ತಾರೆಯು ಅಂತಿಮ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಇದೀಗ ತಮ್ಮ ಬಗ್ಗೆ ತಾವೇ ಬೇಸರ ಹೊರ ಹಾಕಿಕೊಂಡಿರುವ ಅವರು ಈ ಮಾರ್ಗವನ್ನು ಅನುಸರಿಸದಂತೆ ಮನವಿ ಮಾಡಿಕೊಂಡಿದ್ದಾಳೆ.