ಮಕ್ಕಳ ಎದುರೇ ಪತ್ನಿಯನ್ನು ಕೊಲೆಗೈದು ಪಾತ್ರೆಯಲ್ಲಿ ಬೇಯಿಸಿದ ಪಾಪಿ ಪತಿ!

67
firstsuddi

ಇಸ್ಲಾಮಾಬಾದ್: ವ್ಯಕ್ತಿಯೊಬ್ಬ ತನ್ನ ಆರು ಮಕ್ಕಳ ಮುಂದೆಯೇ ಹೆಂಡ್ತಿಯನ್ನು ಕೊಲೆಗೈದು ಪಾತ್ರೆಯಲ್ಲಿ ಬೇಯಿಸಿರುವ ಘಟನೆ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ನಡೆದಿದೆ.

ನಗರದ ಗುಲ್ಶನ್-ಎ-ಇಕ್ಬಾಲ್ ಪ್ರದೇಶದ ಖಾಸಗಿ ಶಾಲೆಯ ಅಡುಗೆ ಮನೆಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಆರೋಪಿಯನ್ನು ಆಶಿಕ್ ಎಂದು ಗುರುತಿಸಲಾಗಿದೆ. ಬಜಾರ್ ಎಜೆನ್ಸಿಯ ಶಾಲೆಯಲ್ಲಿ ವಾಚ್‍ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಆಶಿಕ್, ಸುಮಾರು 8-9 ತಿಂಗಳಿಂದ ಈ ಶಾಲೆಯ ಸೇವಕ ಕ್ವಾರ್ಟಸ್ ನಲ್ಲಿ ವಾಸಿಸುತ್ತಿದ್ದನು.

ಘಟನೆ ಬಳಿಕ ಆರೋಪಿ ತನ್ನ ಮೂವರು ಮಕ್ಕಳೊಂದಿಗೆ ಪರಾರಿಯಾಗಿದ್ದು, ಆತನ 15 ವರ್ಷದ ಪುತ್ರಿ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾಳೆ. ಇದೀಗ ಮೂವರು ಮಕ್ಕಳ ಪಾಲನೆಯನ್ನು ಪೊಲೀಸರು ಮಾಡುತ್ತಿರುವುದಾಗಿ ಜಿಲ್ಲಾ ಪೂರ್ವ ಹಿರಿಯ ಪೊಲೀಸ್ ಅಧೀಕ್ಷಕ (ಎಸ್‍ ಎಸ್‍ ಪಿ) ಅಬ್ದುರ್ ರಹೀಮ್ ಶೆರಾಜಿ ಅವರು ಹೇಳಿದ್ದಾರೆ.

ಆರೋಪಿ ತನ್ನ ಹೆಂಡತಿಗೆ ಅಕ್ರಮ ಸಂಬಂಧಗಳಲ್ಲಿ ತೊಡಗಿಸಿಕೊಳ್ಳಲು ಬಲವಂತಪಡಿಸಿದ್ದು, ಇದಕ್ಕೆ ಮಹಿಳೆ ನಿರಾಕರಿಸಿದ್ದರಿಂದ ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಸದ್ಯ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.