ಅಲೋವೆರಾ ಗಿಡದ ಮೂಲ ಸ್ಥಳ ಆಫ್ರಿಕಾ ಖಂಡ. ಪ್ರಪಂಚದಾದ್ಯಂತ ಉಷ್ಣವಲಯದ ಹವಾಮಾನ ಕಾಡುಗಳಲ್ಲಿ ಬೆಳೆಯುತ್ತದೆ. ಆಯುರ್ವೇದದಲ್ಲಿ ಬಹಳ ಬೇಡಿಕೆಯಿರುವ ಅಲೋವೆರಾ ಗಿಡಗಳಲ್ಲಿ ಅಮಿನೊ ಆಸಿಡ್ ಹಾಗೂ ವಿಟಮಿನ್ ಗಳಾದ ಎ.ಎಫ್.ಸಿ.ಬಿ. ಹೇರಳವಾಗಿದೆ. ಲೋಳೆಸರದ ವೈಜ್ಞಾನಿಕ ಹೆಸರು ಅಲೋವೆರಾ ಇದರಲ್ಲಿ ಸುಮಾರು ನೂರಕ್ಕು ಹೆಚ್ಚು ಔಷಧೀಯ ಗುಣಗಳಿವೆ. ಇದರ ಎಲೆಗಳು ಲೋಳೆ ಹೊಂದಿರುವುದರಿಂದ ಲೋಳೆಸರ ಎಂದು ಕನ್ನಡದಲ್ಲಿ ಕರೆಯುವರು. ಗಟ್ಟಿ ಸಸ್ಯವಾಗಿದ್ದು ಮತ್ತು ಕಹಿಗುಣವನ್ನು ಹೊಂದಿರುವುದರಿಂದ ಕೀಟಗಳ ಹಾವಳಿ ಕಡಿಮೆ ಎಂದೇ ಹೇಳಬಹುದು.ಲೋಳೆಸರವನ್ನು ಬಹಳ ಹಿಂದಿನಿಂದಲೂ ಔಷಧಿ ತಯಾರಿಕೆಯಲ್ಲಿ ಬಳಸಲಾಗುತ್ತಿತ್ತು.
ಲೋಳೆಸರದ ಉಪಯೋಗಗಳು :
- ಆಸಿಡಿಟಿ ಸಮಸ್ಯೆ ಇರುವವರು ಲೋಳೆಸರದ ದ್ರವವನ್ನು ಬೆಳಿಗ್ಗೆ ಸೇವಿಸುವುದರಿಂದ ಆಸಿಡಿಟಿ ಸಮಸ್ಯೆ ಕಡಿಮೆಯಾಗುತ್ತದೆ.
- ರಸವನ್ನು ಮುಖಕ್ಕೆ ಹಚ್ಚುವುದರಿಂದ ಮುಖದ ಭಂಗು ಹೋಗುತ್ತದೆ.
- ಶರೀರದಲ್ಲಿ ಊತವಿದ್ದ ಭಾಗಗಳಿಗೆ ರಸವನ್ನು ಹಚ್ಚುವುದರಿಂದ ಕ್ರಮೇಣ ಊತ ಕಡಿಮೆಯಾಗುತ್ತದೆ.
- ಲೋಳೆರಸವನ್ನು ಅಲ್ಪ ಪ್ರಮಾಣದಲ್ಲಿ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
- ಎಲೆಯ ಚೂರ್ಣ ಒಂದು ಚಮಚ ತ್ರಿಫಲ ಚೂರ್ಣ ಮತ್ತು ಬಿಸಿನೀರು ಸೇರಿಸಿಕೊಂಡು ಕುಡಿಯುವುದರಿಂದ ಮಲವಿಸರ್ಜನೆ ಸರಿಯಾಗುತ್ತದೆ.
- ಲೋಳೆಸರದ ತಿರುಳನ್ನು ಸೇವಿಸುವುದರಿಂದ ಮೂಲವ್ಯಾಧಿ, ಜಠರದ ಹುಣ್ಣು ಗುಣವಾಗುತ್ತದೆ.
- ಚರ್ಮ ರೋಗಕ್ಕೆ ಉತ್ತಮ ಔಷಧ.
- ಲೋಳೆರಸವನ್ನು ತಲೆಗೆ ಹಚ್ಚಿ ಸ್ನಾನ ಮಾಡುವುದರಿಂದ ಹೊಟ್ಟು ಕಡಿಮೆಯಾಗುತ್ತದೆ.ಮತ್ತು ಕೂದಲು ಮೃದುವಾಗುತ್ತದೆ.
- ಸುಟ್ಟಗಾಯಗಳಿಗೆ ಲೋಳೆರಸ ಹಚ್ಚುವುದರಿಂದ ಬೊಬ್ಬೆಗಳು ಬರುವುದಿಲ್ಲ.
- ತಿರುಳನ್ನು ಹಣೆಗೆ ಹಚ್ಚಿಕೊಂಡು ಒಂದು ಬಟ್ಟೆಯನ್ನು ಕಟ್ಟಿಕೊಂಡು ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದರೆ ತಲೆನೋವು ಕಡಿಮೆಯಾಗುತ್ತದೆ.
- ಬೆಡ್ ಸೋರ್ ಅಂದರೆ ಮಲಗಿ ಮಲಗಿ ಅಲ್ಲಲ್ಲಿ ಗಾಯಗಳಾಗಿ ಚರ್ಮ ಕಿತ್ತು ಹೋಗುತ್ತದೆ. ಆ ಸಮಯದಲ್ಲಿ ತಿರುಳಿನ ರಸವನ್ನು ಹಚ್ಚಿದರೆ ಒಣಗುತ್ತದೆ.
- ಲೋಳೆರಸದಲ್ಲಿ ಮೆಂತ್ಯವನ್ನು ಎರಡು ದಿನ ನೆನೆಸಿ ನಂತರ ಮೊಳಕೆ ಬರಿಸಿ ಒಣಗಿಸಿ ಪುಡಿ ಮಾಡಿ ಕೊಬ್ಬರಿ ಎಣ್ಣೆಗೆ ಹಾಕಿ ನಂತರ ಪ್ರತಿನಿತ್ಯ ಎಣ್ಣೆಯನ್ನು ಹಚ್ಚಿಕೊಳ್ಳುವುದರಿಂದ ನೆತ್ತಿ ತಂಪಾಗುತ್ತದೆ.ಹಾಗೂ ಕೂದಲು ಮೃದು ಮತ್ತು ಕಪ್ಪಾಗಿ ಬೆಳೆಯುತ್ತದೆ.
- ಲೋಳೆಸರದ ರಸವನ್ನು ಶೇವಿಂಗ್ ಕ್ರೀಮಾಗಿ ಬಳಸುವುದರಿಂದ ಚರ್ಮ ಮೃದುವಾಗುತ್ತದೆ.










