ರಾಜಸ್ಥಾನದಲ್ಲಿ ಲಂಪಿ ರೋಗದಿಂದ 12 ಸಾವಿರಕ್ಕೂ ಹೆಚ್ಚು ಜಾನುವಾರುಗಳು ಸಾವು…

52
firstsuddi

ಜೈಪುರ : ರಾಜಸ್ಥಾನದಲ್ಲಿ ಲಂಪಿ ಚರ್ಮರೋಗದಿಂದ 12,800 ಕ್ಕೂ ಹೆಚ್ಚು ಜಾನುವಾರುಗಳು ಸಾವನ್ನಪ್ಪಿದೆ.

ಆಗಸ್ಟ್ 10 ರವರೆಗೆ ರಾಜ್ಯದಲ್ಲಿ ವರದಿಯಾದ ಒಟ್ಟು ಜಾನುವಾರುಗಳ ಪೈಕಿ ಶ್ರೀ ಗಂಗಾನಗರದಲ್ಲಿ ಗರಿಷ್ಠ 2,511 ಸಾವುಗಳು ವರದಿಯಾಗಿವೆ, ಬಾರ್ಮರ್ ನಲ್ಲಿ 1,619, ಜೋಧ್ ಪುರದಲ್ಲಿ 1,581, ಬಿಕಾನೇರ್ ನಲ್ಲಿ 1,156, ಜಾಲೋರ್ ನಲ್ಲಿ 1,150 ಮತ್ತು ಜಾಲೋರ್ ನಲ್ಲಿ 1,138 ಸಾವುಗಳು ವರದಿಯಾಗಿವೆ.

ಇಲಾಖೆಯ ಪ್ರಕಾರ, ಒಟ್ಟು 2,81,484 ಪ್ರಾಣಿಗಳು ಈ ರೋಗದಿಂದ ಬಳಲುತ್ತಿವೆ ಮತ್ತು 2,41,685 ಪ್ರಾಣಿಗಳಿಗೆ ಚಿಕಿತ್ಸೆ ನೀಡಲಾಗಿದೆ. ರಾಜ್ಯದಲ್ಲಿ ರೋಗ ಹರಡುವುದನ್ನು ತಡೆಯಲು ಸರ್ಕಾರ ರಾಜಸ್ಥಾನದಲ್ಲಿ ಪ್ರಾಣಿ ಸಂತೆ, ಜಾತ್ರೆ ಆಯೋಜಿಸುವುದನ್ನು ನಿಷೇಧಿಸಿದೆ.