ಭಾರತದಿಂದ ಹೊರಟಿದ್ದ ಚಾರ್ಟರ್ ವಿಮಾನ ಪಾಕಿಸ್ತಾನದಲ್ಲಿ ತುರ್ತು ಲ್ಯಾಂಡಿಂಗ್…

76
firstsuddi

ಇಸ್ಲಾಮಾಬಾದ್ : 12 ಮಂದಿ ಪ್ರಯಾಣಿಕರನ್ನು ಹೊತ್ತು ಭಾರತದಿಂದ ಹೊರಟಿದ್ದ ಚಾರ್ಟರ್ ವಿಮಾನವು ನಿನ್ನೆ ಪಾಕಿಸ್ತಾನದ ಕರಾಚಿಯಲ್ಲಿರುವ ಜಿನ್ನಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗಿದೆ.

ವಿಶೇಷ ವಿಮಾನವು ಹೈದರಾಬಾದ್ ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟು ಮಧ್ಯಾಹ್ನ 12:10 ಕ್ಕೆ (ಸ್ಥಳೀಯ ಕಾಲಮಾನ) ಕರಾಚಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ ಎಂದು ಮೂಲಗಳು ತಿಳಿಸಿವೆ.

ಅಂತರರಾಷ್ಟ್ರೀಯ ಚಾರ್ಟರ್ ವಿಮಾನವು ಭಾರತದಿಂದ ಪಾಕಿಸ್ತಾನಕ್ಕೆ ಬಂದಿರುವುದು ನಿಜ. ಆದರೆ ಇದನ್ನು ಹೊರತುಪಡಿಸಿ ದೇಶದೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ ಎಂದು ನಾಗರಿಕ ವಿಮಾನಯಾನ ಪ್ರಾಧಿಕಾರದ (ಸಿಎಎ) ವಕ್ತಾರರು ತಿಳಿಸಿದ್ದಾರೆ.

ಕರಾಚಿಯಲ್ಲಿ ಇಳಿದ ಸ್ವಲ್ಪ ಸಮಯದ ನಂತರ, ವಿಶೇಷ ವಿಮಾನವು 12 ಪ್ರಯಾಣಿಕರೊಂದಿಗೆ ಮತ್ತೆ ತನ್ನ ಪ್ರಯಾಣವನ್ನು ಆರಂಭಿಸಿದೆ. ಕರಾಚಿ ವಿಮಾನ ನಿಲ್ದಾಣದಲ್ಲಿ ವಿಮಾನ ಏಕೆ ಇಳಿದಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.