ಉದ್ಯಮಿ ಗೌತಮ್ ಅದಾನಿಗೆ Z –ವಿಐಪಿ ಭದ್ರತೆ ಒದಗಿಸಿದ ಕೇಂದ್ರ.

68
firstsuddi

ನವದೆಹಲಿ : ದೇಶದ ನಂ.1 ಶ್ರೀಮಂತ ಉದ್ಯಮಿ ಗೌತಮ್ ಅದಾನಿ ಅವರಿಗೆ ಕೇಂದ್ರ ಸರ್ಕಾರ `Z’ ಮಾದರಿಯ ವಿಐಪಿ ಭದ್ರತೆ ಒದಗಿಸಿದೆ. ಈ ಭದ್ರತಾ ವೆಚ್ಚವು ಪ್ರತಿ ತಿಂಗಳಿಗೆ 15ರಿಂದ 20 ಲಕ್ಷ ರೂ.ಗಳಾಗಿದೆ ಎಂದು ಹೇಳಲಾಗುತ್ತಿದ್ದು, ಈ ಭದ್ರತಾ ವೆಚ್ಚವನ್ನು ಅವರೇ ಭರಿಸಲಿದ್ದಾರೆ.

ಗುಪ್ತಚರ ಇಲಾಖೆ (ಐಬಿ)ಯ ವರದಿಯ ಆಧಾರದ ಮೇಲೆ ಗೃಹ ಸಚಿವಾಲಯವು ಗೌತಮ್ ಅದಾನಿ ಅವರಿಗೆ ಈ ಭದ್ರತೆ ಒದಗಿಸಲು ತೀರ್ಮಾನಿಸಿದೆ. ಮೂಲಗಳ ಪ್ರಕಾರ, ಈ ಭದ್ರತಾ ತಂಡದಲ್ಲಿ 30ಕ್ಕೂ ಹೆಚ್ಚು ಸೇನಾ ಸಿಬ್ಬಂದಿ ಇರಲಿದ್ದಾರೆ.

ಈ ಹಿಂದೆ ದೇಶದ 2ನೇ ಶ್ರೀಮಂತರಾಗಿರುವ ಮುಖೇಶ್ ಅಂಬಾನಿ ಮತ್ತು ಅವರ ಪತ್ನಿ ನೀತಾ ಅಂಬಾನಿ ಅವರಿಗೂ ಗೃಹ ಸಚಿವಾಲಯವು ಝೆಡ್ ಕೆಟಗರಿ ಭದ್ರತೆ ನೀಡಿದ್ದು, ಅದರ ವೆಚ್ಚವನ್ನೂ ಕೂಡ ಅವರೇ ಪಾವತಿಸುತ್ತಿದ್ದಾರೆ.