ಹೈದರಾಬಾದ್ : ಪ್ರವಾದಿ ಮೊಹಮ್ಮದ್ ಕುರಿತು ಅವಹೇಳಕಾರಿ ಹೇಳಿಕೆ ನೀಡಿದ ತೆಲಂಗಾಣದ ಬಿಜೆಪಿ ಶಾಸಕ ಟಿ.ರಾಜಾ ಸಿಂಗ್ ಅವರನ್ನು ಪೊಲೀಸರು ಇಂದು ಬೆಳಗ್ಗೆ ಬಂಧಿಸಿದ್ದಾರೆ.
ಹೈದರಾಬಾದ್ ನಲ್ಲಿ ನಿನ್ನೆ ರಾತ್ರಿ ಬಿಜೆಪಿ ಶಾಸಕರು ಪ್ರವಾದಿಯವರ ಬಗ್ಗೆ ಮಾತನಾಡುವ ವಿಡಿಯೋ ವೈರಲ್ ಆಗಿತ್ತು. ಇದಾದ ಬಳಿಕ ಈ ಮಾತುಗಳನ್ನು ಖಂಡಿಸಿ ಶಾಸಕರ ವಿರುದ್ಧ ಭಾರೀ ಪ್ರತಿಭಟನೆ ನಡೆದಿತ್ತು. ಇದಾದ ಬೆನ್ನಲ್ಲೇ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನಕಾರಿ ಕಾಮೆಂಟ್ ಗಳನ್ನು ಮಾಡುವ ವೀಡಿಯೋವನ್ನು ಸಿಂಗ್ ಬಿಡುಗಡೆ ಮಾಡಿದ್ದರು. ಇದರ ನಂತರ ರೊಚ್ಚಿಗೆದ್ದ ಸಮುದಾಯದ ಜನ ನಿನ್ನೆ ರಾತ್ರಿಯೇ ಪೊಲೀಸ್ ಕಮಿಷನರ್ ಸಿ.ವಿ. ಆನಂದ ಅವರ ಕಚೇರಿ ಎದುರು ಹಾಗೂ ನಗರದ ಹಲವೆಡೆ ಪ್ರತಿಭಟನೆ ಆರಂಭಿಸಿದರು. ರಾಜಾ ಸಿಂಗ್ ಬಂಧನಕ್ಕೆ ಪ್ರತಿಭಟನಾಕಾರರು ಪಟ್ಟು ಹಿಡಿದರು. ತಕ್ಷಣ ಅವರನ್ನು ವಶಕ್ಕೆ ಪಡೆದು ನಂತರ ವಿವಿಧ ಠಾಣೆಗಳಿಗೆ ರವಾನಿಸಲಾಗಿದೆ.
ಈ ವಿಡಿಯೋದಲ್ಲಿ ರಾಜಾ ಸಿಂಗ್ ಅವರು ಹಾಸ್ಯನಟ ಮುನವ್ವರ್ ಫಾರೂಕಿ ಮತ್ತು ಅವರ ತಾಯಿಯ ಬಗ್ಗೆಯೂ ಕಾಮೆಂಟ್ ಮಾಡಿದ್ದಾರೆ ಎನ್ನಲಾಗಿದೆ.










