ಗೋವಾದಲ್ಲಿ ಕಾಂಗ್ರೆಸ್​​ಗೆ ದೊಡ್ಡ ಹೊಡೆತ ; ಬಿಜೆಪಿ ಸೇರಲಿದ್ದಾರೆ 8 ಕೈ ಶಾಸಕರು.

61
firstsuddi

ಪಣಜಿ : ಗೋವಾದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಕಾಂಗ್ರೆಸ್ ನ 11 ಶಾಸಕರ ಪೈಕಿ 8 ಶಾಸಕರು ಇಂದು ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ಪಕ್ಷದ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ.

ಮಾಜಿ ಸಿಎಂ ದಿಗಂಬರ್ ಕಾಮತ್, ಕಾಂಗ್ರೆಸ್ ಅಧ್ಯಕ್ಷ ಮೈಕೆಲ್ ಲೋಬೋ, ದೇಲಿಲಾ ಲೋಬೋ, ರಾಜೇಶ್ ಫಾಲ್ದೇಸಾಯಿ, ಕೇದಾರ್ ನಾಯ್ಕ್, ಸಂಕಲ್ಪ್ ಅಮೋನ್ಕರ್, ಅಲೆಕ್ಸೋ ಸಿಕ್ವೀರಾ, ಮತ್ತು ರುಡಾಲ್ಫ್ ಫೆರ್ನಾಂಡಿಸ್ ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಎಲ್ಲ ಶಾಸಕರು ಈಗಾಗಲೇ ಪ್ರಮೋದ್ ಸಾವಂತ್ ಅವರನ್ನ ಭೇಟಿ ಮಾಡಿದ್ದಾರೆ.

ಗೋವಾದಲ್ಲಿ ಕಾಂಗ್ರೆಸ್ 11 ಮಂದಿ ಶಾಸಕರ ಬಲ ಹೊಂದಿತ್ತು. ಇದೀಗ ಎಂಟು ಮಂದಿ ಶಾಸಕರ ಸೇರ್ಪಡೆಯಿಂದ ಈ ಸಂಖ್ಯೆ ಮೂರಕ್ಕೆ ಕುಸಿಯುವ ಭೀತಿ ಕಾಂಗ್ರೆಸ್ ಗೆ ಎದುರಾಗಿದೆ.