ನಟಿ ಅಮೂಲ್ಯಗೆ ಇಂದು ಹುಟ್ಟು ಹಬ್ಬದ ಸಂಭ್ರಮ…

69
firstsuddi

ಸ್ಯಾಂಡಲ್ ವುಡ್ ನಟಿ ಅಮೂಲ್ಯ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಅಭಿಮಾನಿಗಳು ತಮ್ಮ ನೆಚ್ಚಿನ ನಟಿಯ ಜನ್ಮದಿನಕ್ಕೆ ಶುಭ ಕೋರುತ್ತಿದ್ದಾರೆ. ಕುಟುಂಬದವರು, ಸೆಲೆಬ್ರಿಟಿಗಳು ಮತ್ತು ಸ್ನೇಹಿತರಿಂದಲೂ ಶುಭಾಶಯಗಳು ಹರಿದುಬರುತ್ತಿವೆ. ಬಾಲ ನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ಅಮೂಲ್ಯ ನಂತರ ‘ಚೆಲುವಿನ ಚಿತ್ತಾರ’ ಸಿನಿಮಾ ಮೂಲಕ ಹೀರೋಯಿನ್ ಆಗಿ ಮಿಂಚಿದರು. ಆನಂತರ ಶ್ರಾವಣಿ ಸುಬ್ರಹ್ಮಣ್ಯ, ಚೈತ್ರದ ಚಂದ್ರಮ, ಗಜಕೇಸರಿ, ಖುಷಿ ಖುಷಿಯಾಗಿ, ಸೇರಿ ಹಲವು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ.

ಈ ವರ್ಷ ಜೂನ್ ತಿಂಗಳಲ್ಲಿ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ ಅಮೂಲ್ಯ ಅವರು ಸದ್ಯ ಮಕ್ಕಳ ಆರೈಕೆಯಲ್ಲಿ ಬ್ಯುಸಿ ಆಗಿದ್ದಾರೆ. ಅವರ ಹುಟ್ಟುಹಬ್ಬದ ಪ್ರಯುಕ್ತ ಪತಿ ಜಗದೀಶ್ ಅವರು ಪತ್ನಿಗೆ ವಿಶೇಷವಾಗಿ ಶುಭಕೋರಿದ್ದಾರೆ. ನನಗೆ ಸೆಪ್ಟೆಂಬರ್ 14 ವ್ಯಾಲೆಂಟೈನ್ ಡೇ. ಹುಟ್ಟುಹಬ್ಬದ ಶುಭಾಶಯಗಳು ಅಮೂಲ್ಯ. ನೀನು ಯಾವಾಗಲೂ ಮಿನುಗುವ ನಕ್ಷತ್ರವಾಗಿರಬೇಕು. ಇದು ನಾವು ಕಳೆದ ಪ್ರೀತಿಯ ಕ್ಷಣಗಳು ಎಂದು ಕ್ಯಾಪ್ಷನ್ ನೀಡಿದ್ದಾರೆ.

ಜಗದೀಶ್ ಆರ್. ಚಂದ್ರ ಜೊತೆ ಮದುವೆ ಆದ ಬಳಿಕ ಅಮೂಲ್ಯ ಅವರು ನಟನೆಯಿಂದ ಕೊಂಚ ದೂರ ಉಳಿದುಕೊಂಡಿದ್ದಾರೆ. ಅವರು ಮತ್ತೆ ಸಿನಿಮಾ ಮಾಡಬೇಕೆಂಬುದು ಅಭಿಮಾನಿಗಳ ಬಯಕೆ. ತಮ್ಮ ನೆಚ್ಚಿನ ನಟಿಯನ್ನು ತೆರೆಯ ಮೇಲೆ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.