ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ್ದ ನಟಿ ರೆಜಿನಾ ಹುಡುಗರ ಸಾಮರ್ಥ್ಯ ಮ್ಯಾಗಿಯಂತೆ 2 ನಿಮಿಷದಲ್ಲೇ ಮುಗಿಯತ್ತೆ ಎಂದು ಹೇಳಿದ್ದರು. ಇದೇ ವಿಚಾರವಾಗಿ ನಟಿ ಹಿಗ್ಗಾಮುಗ್ಗ ಟ್ರೋಲ್ ಆಗಿದ್ದಾರೆ.
ಈಗ ಈ ಹೇಳಿಕೆಗೆ ತೆಲುಗು ನಟ ಅಡಿವಿ ಶೇಷ್ ಅವರು ತಿರುಗೇಟು ನೀಡಿದ್ದಾರೆ. ಹುಡುಗರ ಸಾಮರ್ಥ್ಯವನ್ನು 2 ನಿಮಿಷದಲ್ಲೇ ಮುಗಿಯುವ ಮ್ಯಾಗಿಗೆ ರೆಜಿನಾ ಹೋಲಿಸಿದರೆ, ಅಡಿವಿ ಶೇಷ್ ‘ನನಗೆ ಸ್ಟಾಮಿನಾ ಜಾಸ್ತಿ’ ಎಂದು ಹೇಳಿದ್ದಾರೆ. ಇದೀಗ ಇವರ ಹೇಳಿಕೆ ಕೂಡ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡಿದೆ.
ರೆಜಿನಾ ಹಾಗೂ ನಿವೇತಾ ಥಾಮಸ್ ಅವರು ‘ಸಾಕಿನಿ ಧಾಕಿನಿ’ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದಾರೆ. ಈ ಚಿತ್ರಕ್ಕೆ ಸುಧೀರ್ ವರ್ಮಾ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಇಬ್ಬರೂ ನಟಿಯರು ಶಾಕಿನಿ ಡಾಕಿನಿ ಸಿನಿಮಾದ ಪ್ರಚಾರದಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ರೆಜಿನಾ ಹುಡುಗರ ಲೈಂಗಿಕ ಸಾಮರ್ಥ್ಯ ಮ್ಯಾಗಿ ಥರ, ಎರಡೇ ನಿಮಿಷದಲ್ಲಿ ಆಗಿ ಹೋಗುತ್ತದೆ ಎಂದು ಡಬಲ್ ಮೀನಿಂಗ್ ಜೋಕ್ ಮಾಡಿ ಪೇಚಿಗೆ ಸಿಲುಕಿದ್ದಾರೆ.










