ಪಾಟ್ನಾ : ಬಿಹಾರದ ಕೃಷಿ ಸಚಿವ ಸುಧಾಕರ್ ಸಿಂಗ್ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸಿಂಗ್ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ. ಪ್ರವಾಸೋದ್ಯಮ ಸಚಿವ ಕುಮಾರ್ ಸರ್ವಜೀತ್ ಅವರನ್ನು ರಾಜ್ಯದ ನೂತನ ಕೃಷಿ ಸಚಿವರನ್ನಾಗಿ ನೇಮಿಸಲಾಗಿದೆ. ಪ್ರವಾಸೋದ್ಯಮ ಇಲಾಖೆಯ ಜವಾಬ್ದಾರಿಯನ್ನು ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ನಿರ್ವಹಿಸಲಿದ್ದಾರೆ.
ತಮ್ಮದೇ ಇಲಾಖೆಯಲ್ಲಿನ ಭ್ರಷ್ಟಾಚಾರದ ಕುರಿತು ಇತ್ತೀಚೆಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಸುಧಾಕರ್ ಸಿಂಗ್ ಅವರು, ನನ್ನ ಇಲಾಖೆಯಲ್ಲಿ ಅನೇಕ ಕಳ್ಳರಿದ್ದು, ಹಣವನ್ನು ದೋಚುತ್ತಿದ್ದಾರೆ. ನಾನು ಇಲಾಖೆಗೆ ಪ್ರಭಾರಿಯಾಗಿರುವುದರಿಂದ ಅವರಿಗೆ ಮುಖ್ಯಸ್ಥನಾಗುತ್ತೇನೆ. ನನಗಿಂತ ಮೇಲಿರುವ ಅನೇಕ ಮುಖ್ಯಸ್ಥರಿದ್ದಾರೆ ಎಂದಿದ್ದರು.










