ಜಿ20 ನಾಯಕರ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿರುವ ಪ್ರಧಾನಿ ಮೋದಿ.

77
firstsuddi

ನವದೆಹಲಿ : ಇಂಡೋನೇಷ್ಯಾದ ಬಾಲಿಯಲ್ಲಿ ನವೆಂಬರ್ 15-16 ರವರೆಗೆ ನಡೆಯಲಿರುವ 17ನೇ ಜಿ20 ನಾಯಕರ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಳ್ಳಲಿದ್ದಾರೆ.

ಶೃಂಗಸಭೆಯಲ್ಲಿ ಭಾಗಿಯಾಗುವ ನಿಟ್ಟಿನಲ್ಲಿ ಇಂದು ಇಂಡೋನೇಷ್ಯಾ ನಗರಕ್ಕೆ ಮೋದಿ ತೆರಳಲಿದ್ದಾರೆ. ಈ ವೇಳೆ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಮತ್ತು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಮೋದಿ ಅವರು ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

ಭಾರತದ ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ಪ್ರಕಾರ, ಮೋದಿ ಅವರು ಇಂಡೋನೇಷ್ಯಾದಲ್ಲಿ ಸುಮಾರು 45 ಗಂಟೆಗಳವರೆಗೆ ಇರಲಿದ್ದು, ಈ ಸಮಯದಲ್ಲಿ ಆಹಾರ ಮತ್ತು ಇಂಧನ ಭದ್ರತೆ, ಡಿಜಿಟಲ್ ರೂಪಾಂತರ ಮತ್ತು ಆರೋಗ್ಯದ ಕುರಿತು ಮೂರು ನಿರ್ಣಾಯಕ ಅವಧಿಗಳಲ್ಲಿ ಭಾಗವಹಿಸಲಿದ್ದಾರೆ. ಡಿ.1ರಿಂದ ಔಪಚಾರಿಕವಾಗಿ ಜಿ20 ಅಧ್ಯಕ್ಷ ಸ್ಥಾನವನ್ನು ಭಾರತ ವಹಿಸಿಕೊಳ್ಳಲಿದೆ.