ಯಾವುದೇ ಕಾರಣಕ್ಕೂ ನಾನು ಬಿಜೆಪಿ ಬಿಡಲ್ಲ : ರಮೇಶ್ ಜಾರಕಿಹೊಳಿ ಸ್ಪಷ್ಟನೆ…

63
firstsuddi

ಬೆಳಗಾವಿ : ಯಾವುದೇ ಕಾರಣಕ್ಕೂ ನಾನು ಬಿಜೆಪಿ ಬಿಡಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಜೆಡಿಎಸ್ ಸೇರುತ್ತಾರೆ ಎನ್ನುವ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಇಂದು ಖಾಸಗಿ ಕಾರ್ಯಕ್ರಮದ ನಿಮಿತ್ತ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿರುವ ಬೆಳಗುಂದಿ ಗ್ರಾಮಕ್ಕೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್ ಜಾರಕಿಹೊಳಿ, ನನ್ನ ಮನಸಿಗೆ ಬೇಜಾರಾಗಿ ಒಂದು ವರ್ಷದಿಂದ ಮಾಧ್ಯಮದಿಂದ ದೂರವಿದ್ದೆ. ಅನಿವಾರ್ಯವಾಗಿ ಇಂದು ಒಂದೇ ಒಂದು ವಿಷಯ ಸ್ಪಷ್ಟಪಡಿಸುವೆ. ಹೆಚ್.ಡಿ.ಕುಮಾರಸ್ವಾಮಿ ಜೊತೆ ನಾನು ಮಾತನಾಡಿದ್ದು ನಿಜ.ನನಗೆ ಸುಳ್ಳು ಹೇಳುವ ಚಟವಿಲ್ಲ. ದಿನನಿತ್ಯ ಕುಮಾರಸ್ವಾಮಿ ನನ್ನ ಜೊತೆ ಫೋನ್ ನಲ್ಲಿ ಟಚ್ ನಲ್ಲಿದ್ದಾರೆ. ಆದ್ರೆ ನಾನು ಬಿಜೆಪಿ ಬಿಡುವ ಪ್ರಶ್ನೆ ಇಲ್ಲ ಎಂದರು.

2023ಕ್ಕೆ ಬಿಜೆಪಿಯ ಹತ್ತು ಜನ ಪ್ರಮುಖರಲ್ಲಿ ನಾನು ಒಬ್ಬ ಆಗುತ್ತೇನೆ. ಏಕೆಂದರೆ ಬಹಳಷ್ಟು ಜನ ರಿಟೈಡ್ ಆಗುತ್ತಾರೆ, ಹತ್ತು ಮಂದಿ ಬಿಜೆಪಿಯ ಪ್ರಮುಖರಲ್ಲಿ ನಾನೇ ಇರುವಾಗ. ಬೇರೆಯವರನ್ನು ಮಂತ್ರಿ ಮಾಡುವ ಹಾಗೂ ಬೇರೆಯವರಿಗೆ ಟಿಕೆಟ್ ಕೊಡುವ ಶಕ್ತಿ ಕೊಟ್ಟಾಗ ನಾನು ಬಿಜೆಪಿ ಏಕೆ ಬಿಡಲಿ? ನಾನು ಬಿಜೆಪಿ ಬಿಡಲ್ಲ.. ಬಿಡಲ್ಲ.. ಎಂದು ಪುನರುಚ್ಚರಿಸಿದರು.