ಮೊದಲೇ ಗೊತ್ತಾಗಿದ್ದು ಒಳ್ಳೆಯದಾಯ್ತು ಎಂದ ನಟಿ ವೈಷ್ಣವಿ – ವಿದ್ಯಾಭರಣ್ ಜೊತೆಗಿನ ಮದುವೆ ಮಾತುಕತೆ ಕ್ಯಾನ್ಸಲ್…

58
firstsuddi

ಇತ್ತೀಚೆಗಷ್ಟೇ ಕನ್ನಡ ಕಿರುತೆರೆ ಮೂಲಕ ಜನಪ್ರಿಯ ಗಳಿಸಿದ್ದ ನಟಿ ವೈಷ್ಣವಿ ಗೌಡ ಅವರ ನಿಶ್ಚಿತಾರ್ಥ ನಟ ವಿದ್ಯಾಭರಣ್ ಅವರ ಜೊತೆಗೆ ನಡೆದಿದೆ ಎನ್ನುವ ಸುದ್ದಿ ಹರಿದಾಡಿತ್ತು. ಆದರೆ ನಟಿ ಸ್ಪಷ್ಟನೆ ನೀಡಿ ಇನ್ನೂ ಎಂಗೇಜ್ಮೆಂಟ್ ಆಗಿಲ್ಲ. ತಾಂಬೂಲ ಬದಲಾಯಿಸಿದ್ದಾರೆ ಅಷ್ಟೇ ಎಂದು ಹೇಳಿದ್ದರು.

ನಟಿ ವೈಷ್ಣವಿ ಗೌಡ ಜೊತೆ ನಿಶ್ಚಿತಾರ್ಥ ಆಗಿರೋ ಫೋಟೋ ವೈರಲ್ ಆದ ಬೆನ್ನಲ್ಲೇ ನಟಿಯೊಬ್ಬರ ಆಡಿಯೋ ಸದ್ದು ಮಾಡುತ್ತಿದ್ದು, ವಿದ್ಯಾಭರಣ್ ಮೇಲೆ ಅನೇಕ ಆರೋಪಗಳನ್ನ ಮಾಡಿದ್ದಾರೆ. ಇನ್ ಸ್ಟಾಗ್ರಾಂ ಖಾತೆಯಿಂದ ಅನೇಕ ಹುಡುಗಿಯರೊಂದಿಗೆ ಮೆಸೇಜ್ ಮಾಡಿ ಅನುಚಿತ ವರ್ತನೆ ತೋರಿದ್ದಾನೆ. ಏನೇ ಆಗಲಿ ವೈಷ್ಣವಿಗೆ ಮೋಸ ಆಗಬಾರದು ಎಂದು ಹೇಳಿಕೊಂಡಿದ್ದಾರೆ. ಸದ್ಯ ಈ ಆಡಿಯೋ ಇದೀಗ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.

ಇದೀಗ ವಿದ್ಯಾಭರಣ್ ಜೊತೆಗಿನ ಮದುವೆ ಮಾತುಕತೆ ಕ್ಯಾನ್ಸಲ್ ಆದ ಬಗ್ಗೆ ವೈಷ್ಣವಿ ಗೌಡ ಮಾಹಿತಿ ನೀಡಿದ್ದಾರೆ. ವಿದ್ಯಾಭರಣ್ ಜೊತೆ ನಿಶ್ಚಿತಾರ್ಥ ನಡೆದಿಲ್ಲ ಅಂತ ನಾನು ಮುಂಚಿನಿಂದಲೂ ಹೇಳ್ತಾ ಬಂದಿದೀನಿ. ಇದನ್ನು ಇಲ್ಲಿಗೇ ಬಿಟ್ಟುಬಿಡಿ. ನಾನು ಈ ಕುರಿತು ಮತ್ತೆ ಮಾತನಾಡಿದ್ರೆ ಬೆಳೆಯುತ್ತಲೇ ಹೋಗುತ್ತದೆ. ಹುಡುಗನ ಕಡೆಯಿಂದ ಇನ್ನೇನೋ ಮಾತು ಬರಬಹುದು. ಅವರು ಹೆಣ್ಣು ನೋಡೋ ಶಾಸ್ತ್ರಕ್ಕೆಂದು ಬಂದು ತಾಂಬೂಲ ಬದಲಾಯಿಸಿಕೊಂಡ್ರು ಅಷ್ಟೇ. ಅದು ನಿಶ್ಚಿತಾರ್ಥ ಅಲ್ಲ. ನಾನು ಹಾಗೂ ನನ್ನ ಕುಟುಂಬ ಇದನ್ನು ಇಲ್ಲಿಗೇ ಬಿಡುತ್ತಿದ್ದೇವೆ. ಮೊದಲಿಗೇ ಗೊತ್ತಾಗಿದ್ದು ಒಳ್ಳೆಯದಾಯ್ತು. ಒಂದು ವೇಳೆ ಮದುವೆ ಆದ್ಮೇಲೆ ಗೊತ್ತಾದ್ರೆ ಕಷ್ಟ ಆಗ್ತಿತ್ತು ಅಲ್ವೇ? ಎಂದಿದ್ದಾರೆ ನಟಿ ವೈಷ್ಣವಿ.

ವಿದ್ಯಾಭರಣ್ ಹೇಳಿದ್ದೇನು? : ವೈಷ್ಣವಿ ಜೊತೆಗೆ ನನ್ನ ನಿಶ್ಚಿತಾರ್ಥ ನಡೆದಿಲ್ಲ. ಎರಡು ಕುಟುಂಬದ ನಡುವೆ ಪ್ರಾಥಮಿಕ ಮಾತುಕತೆಯಾಗಿತ್ತು. ಆದರೆ ಈ ಫೋಟೋ ಎಲ್ಲಿಂದ ವೈರಲ್ ಆಯಿತು ಎನ್ನುವುದು ಗೊತ್ತಿಲ್ಲ. ನಮ್ಮ ಕುಟುಂಬದವರ ವರ್ಚಸ್ಸನ್ನು ಹಾಳು ಮಾಡಲು ಪ್ಲಾನ್ ಮಾಡಿದ್ದಾರೆ. ನಾನು ಯಾವುದೇ ಹುಡುಗಿಯರೊಂದಿಗೆ ತಪ್ಪಾಗಿ ನಡೆದುಕೊಂಡಿಲ್ಲ. ನನ್ನ ಮೊದಲ ಫಿಲ್ಮ್ ಬಂದಾಗಲೇ ಇವರು ಆರೋಪ ಮಾಡಬಹುದಿತ್ತು. ಹೆಸರು ಹೇಳಲು ಧೈರ್ಯವಿಲ್ಲದಿರುವ ಆಕೆ ಆರೋಪ ಮಾಡುತ್ತಿದ್ದಾಳೆ ಎಂದು ಕಿಡಿಕಾರಿದ್ದಾರೆ.

ನಾಳೆ ಕಮೀಷನರ್ ಗೆ ದೂರು ನೀಡುತ್ತೇನೆ. ನನ್ನ ಮೇಲೆ ಇಷ್ಟೆಲ್ಲ ಆರೋಪ ಮಾಡುವ ಬದಲು ಆಕೆಯೇ ಕಂಪ್ಲೆಂಟ್ ಕೊಡಬಹುದಿತ್ತು. ನಮ್ಮ ಏಳಿಗೆಯನ್ನು ಸಹಿಸಲು ಸಾಧ್ಯವಾಗದೇ ಇರುವ ಹಿತಶತ್ರುಗಳು ಹೀಗೆ ಮಾಡುತ್ತಿದ್ದಾರೆ. ನಾನು ಇನ್ಸ್ಟಾಗ್ರಾಮ್ ಅನ್ನು ಮೊದಲೇ ಡಿಲೀಟ್ ಮಾಡಿದ್ದೇನೆ. ನನ್ನ ಇನ್ ಸ್ಟಾಗ್ರಾಮ್ ಹ್ಯಾಕ್ ಆಗಿತ್ತು. ತುಂಬಾ ಹಿಂದೆಯೇ ಡಿಲೀಟ್ ಆಗಿದೆ. ಇಂತಹ ಅಪಪ್ರಚಾರ ಮಾಡುವವರ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ ಎಂದು ತಿಳಿಸಿದ್ದಾರೆ.