ಅದಿತಿ ಪ್ರಭುದೇವ ಅರಿಶಿಣ ಶಾಸ್ತ್ರ – ಫೋಟೋ ಹಂಚಿಕೊಂಡ ನಟಿ.

72
firstsuddi

ಸ್ಯಾಂಡಲ್​ವುಡ್ ನಟಿ ಅದಿತಿ ಪ್ರಭುದೇವ ಅವರ ಅರಿಶಿಣ ಶಾಸ್ತ್ರ ಇಂದು ನಡೆಯುತ್ತಿದ್ದು, ಆ ಫೋಟೋಗಳನ್ನು ಅದಿತಿ ಪ್ರಭುದೇವ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ನಟಿಗೆ ಎಲ್ಲರೂ ಶುಭಾಶಯ ತಿಳಿಸುತ್ತಿದ್ದಾರೆ.

ಯಶಸ್ ಅವರ ಜೊತೆ ಅದಿತಿ ಹಸೆಮಣೆ ಏರುತ್ತಿದ್ದಾರೆ. ಯಶಸ್ ಉದ್ಯಮಿ ಮತ್ತು ಕಾಫಿ ಪ್ಲಾಂಟರ್ ಆಗಿದ್ದಾರೆ. ಇವರ ಮದುವೆ ನಾಳೆ ಬೆಂಗಳೂರಿನ ಅರಮನೆಯ ಮೈದಾನದಲ್ಲಿ ನಡೆಯಲಿದೆ.

ಈಗಾಗಲೇ ತಮ್ಮ ಮದುವೆಯ ಆಹ್ವಾನ ಪತ್ರಿಕೆಯನ್ನು ಚಿತ್ರೋದ್ಯಮದ ಅನೇಕರಿಗೆ ನೀಡಿದ್ದು, ನಾಳೆ ಸಾಕಷ್ಟು ಕಲಾವಿದರು ಮತ್ತು ತಂತ್ರಜ್ಞರು ಅದಿತಿ ಪ್ರಭುದೇವ್ ಅವರ ಮದುವೆಯಲ್ಲಿ ಪಾಲ್ಗೊಳ್ಳಲಿದ್ದಾರೆ.