ಪಾಕಿಸ್ತಾನದ ಡ್ರೋನ್ ಹೊಡೆದುರುಳಿಸಿದ ಬಿಎಸ್ಎಫ್.

57
firstsuddi

ಚಂಡೀಗಢ : ಪಾಕಿಸ್ತಾನದಿಂದ ಭಾರತದ ಕಡೆಗೆ ನುಸುಳಲು ಪ್ರಯತ್ನಿಸುತ್ತಿದ್ದ ಡ್ರೋನ್ ಒಂದನ್ನು ಬಿಎಸ್ಎಫ್ ಅಧಿಕಾರಿಗಳು ಹೊಡೆದುರುಳಿಸಿದ್ದಾರೆ.

ಅಮೃತಸರ ನಗರದ ಉತ್ತರಕ್ಕೆ 40 ಕಿಮೀ ದೂರದಲ್ಲಿರುವ ಚಹರ್ ಪುರ್ ಗ್ರಾಮದ ಬಳಿ ಭಾರತದ ಭೂಪ್ರದೇಶವನ್ನು ಪ್ರವೇಶಿಸುವುದನ್ನು ಗಮನಿಸಿದ ಬಿಎಸ್ಎಫ್ ಸಿಬ್ಬಂದಿ ನಿನ್ನೆ ರಾತ್ರಿ ಡ್ರೋನ್ ಮೇಲೆ ಗುಂಡು ಹಾರಿಸಿದ್ದಾರೆ.

ಸೈನಿಕರು ಹೊಡೆದುರುಳಿಸಿದ ಡ್ರೋನ್ ಚಹರ್ ಪುರ್ ಗ್ರಾಮದಲ್ಲಿ ಗಡಿ ಬೇಲಿಯ ಬಳಿ ದೊರಕಿದೆ. ಡ್ರೋನ್ ಪತ್ತೆಯಾದಾಗ ಅದು ಭಾಗಶಃ ಹಾನಿಯಾದ ಸ್ಥಿತಿಯಲ್ಲಿತ್ತು. ಡ್ರೋನ್ ಕೆಳಗಡೆ ಬಿಳಿ ಬಣ್ಣದ ಪಾಲಿಥಿನ್ ನಲ್ಲಿ ಶಂಕಿತ ವಸ್ತುವನ್ನು ಅಳವಡಿಸಲಾಗಿದ್ದು, ಅದನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಡ್ರೋನ್ ಡ್ರಗ್ಸ್ ಪೇಲೋಡ್ ಅನ್ನು ಹೊತ್ತೊಯ್ಯುತ್ತಿತ್ತು ಎಂದು ಶಂಕಿಸಲಾಗಿದೆ. ಆ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನವೆಂಬರ್ 25ರಂದು ಅಮೃತಸರದಲ್ಲಿ ಭಾರತ- ಪಾಕಿಸ್ತಾನದ ಅಂತಾರಾಷ್ಟ್ರೀಯ ಗಡಿಯ ಬಳಿ ಬಿಎಸ್ ಎಫ್ ಪಡೆಗಳು ಪಾಕಿಸ್ತಾನದ ಡ್ರೋನ್ ಅನ್ನು ಹೊಡೆದುರುಳಿಸಿದ್ದವು.