ಸಿಧು ಮೂಸೆವಾಲಾ ಹತ್ಯೆ – ಮಾಸ್ಟರ್ ಮೈಂಡ್ ಗೋಲ್ಡಿ ಬ್ರಾರ್ ಬಂಧನ…

66
firstsuddi

ನವದೆಹಲಿ : ಪಂಜಾಬಿ ಖ್ಯಾತ ಗಾಯಕ ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್ ಮೈಂಡ್ ಗೋಲ್ಡಿ ಬ್ರಾರ್ ನನ್ನು ಕ್ಯಾಲಿಫೋರ್ನಿಯಾದಲ್ಲಿ ಬಂಧಿಸಲಾಗಿದೆ ಎಂದು ಭಾರತದ ಗುಪ್ತಚರ ಸಂಸ್ಥೆಯ ಮೂಲಗಳು ತಿಳಿಸಿವೆ.

ಸಿಧು ಮೂಸೆವಾಲಾ ಪಂಜಾಬ್ ನ ಮಾನ್ಸಾ ಜಿಲ್ಲೆಯಲ್ಲಿ ತನ್ನ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿದ್ದರು. ಸಿಧು ಸಾವಿನ ಕೆಲ ದಿನಗಳ ಬಳಿಕ ಬ್ರಾರ್ ಸಿಧು ಹತ್ಯೆಗೆ ತಾನೇ ಕಾರಣ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಗಳನ್ನು ಅಪ್ಲೋಡ್ ಮಾಡಿದ್ದ. ಸೇಡಿಗಾಗಿ ಹತ್ಯೆ ಮಾಡಲಾಗಿದೆ ಎಂದು ಹೇಳಿದ್ದ.

ಗ್ಯಾಂಗ್ ಸ್ಟರ್ ಗೋಲ್ಡಿ ಬ್ರಾರ್ ಕೆನಡಾ ಮೂಲದವನಾಗಿದ್ದಾನೆ. ಗೋಲ್ಡಿ ಬ್ರಾರ್ ಬಂಧನದ ಬಗ್ಗೆ ಕ್ಯಾಲಿಫೋರ್ನಿಯಾ ಸರ್ಕಾರ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ಆದರೆ ಭಾರತದ ಗುಪ್ತಚರ ಇಲಾಖೆಗಳಾದ ಆರ್ ಎಡಬ್ಲ್ಯೂ, ಐಬಿ, ದೆಹಲಿ ಪೊಲೀಸ್ ಸ್ಪೆಷಲ್ ಸೆಲ್ ಮತ್ತು ಪಂಜಾಬ್ ಗುಪ್ತಚರ ಸಂಸ್ಥೆ ಈ ಮಾಹಿತಿಯನ್ನು ಪಡೆದಿರುವುದಾಗಿ ತಿಳಿಸಿವೆ. ಗೋಲ್ಡಿ ಬ್ರಾರ್ ನನ್ನು ಕ್ಯಾಲಿಫೋರ್ನಿಯಾದಲ್ಲಿ ಪತ್ತೆಹಚ್ಚಲಾಗಿದ್ದು, ಆತನನ್ನು ಬಂಧಿಸಲಾಗಿದೆ ಎಂದು ತಿಳಿಸಿವೆ.