ಬರ್ನಾರ್ಡ್ ಅರ್ನಾಲ್ಟ್ ವಿಶ್ವದ ನಂ.1 ಶ್ರೀಮಂತ.. 2ನೇ ಸ್ಥಾನಕ್ಕೆ ಕುಸಿದ ಮಸ್ಕ್

52
firstsuddi

ನ್ಯೂಯಾರ್ಕ್: ವಿಶ್ವದ ನಂಬರ್ ಒನ್ ಶ್ರೀಮಂತ ಆಗಿ ಎಲ್‍ವಿಎಂಎಚ್‍ನ ಮುಖ್ಯ ಕಾರ್ಯ ನಿರ್ವಾಹಕ ಬರ್ನಾರ್ಡ್ ಅರ್ನಾಲ್ಟ್ ಹೊರಹೊಮ್ಮಿದರೆ, ಟೆಸ್ಲಾ ಕಂಪನಿ ಮಾಲೀಕ ಎಲೋನ್ ಮಸ್ಕ್ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ.

ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, ಮಸ್ಕ್ ಒಟ್ಟು 178.6 ಬಿಲಿಯನ್ ಡಾಲರ್ ನಿವ್ವಳ ಮೌಲ್ಯ ಹೊಂದಿದ್ದಾರೆ. 188.6 ಬಿಲಿಯನ್ ಡಾಲರ್ ಸಂಪತ್ತು ಹೊಂದುವ ಮೂಲಕ ಅರ್ನಾಲ್ಟ್ ಶ್ರೀಮಂತರ ಪಟ್ಟಿಯಲ್ಲಿ ನಂಬರ್ 1 ಸ್ಥಾನಕ್ಕೆ ಏರಿದ್ದಾರೆ.

ಕಳೆದ ವಾರ ಅರ್ನಾಲ್ಟ್ ಮತ್ತು ಆತನ ಕುಟುಂಬ ಸದಸ್ಯರ ನಿವ್ವಳ ಮೊತ್ತ ಮೊದಲ ಬಾರಿ 185.4 ಬಿಲಿಯನ್ ಡಾಲರ್ ಆಗಿದ್ದು, ಇದು ಮಸ್ಕ್ 185.3 ಬಿಲಿಯನ್ ಡಾಲರ್ ಮೊತ್ತಕ್ಕಿಂತ ಹೆಚ್ಚಿತ್ತು. ಟೆಸ್ಲಾ ಸಿಇಒ ಮಸ್ಕ್ ಟ್ವಿಟರ್ ಖರೀದಿ ಬಳಿಕ ಅವರ ಸಂಪತ್ತಿನಲ್ಲಿ 44 ಬಿಲಿಯನ್ ಡಾಲರ್ ಕುಸಿತ ಕಂಡಿದೆ.