ಯಾವುದೇ ತನಿಖೆ ಮಾಡದೇ ಟೆರರಿಸ್ಟ್ ಅಂತ ಹೇಗೆ ಘೋಷಣೆ ಮಾಡಿದ್ರಿ? : ಡಿ.ಕೆ ಶಿವಕುಮಾರ್.

65
firstsuddi

ಬೆಂಗಳೂರು : ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣದ ಬಗ್ಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು, ಯಾವುದೇ ತನಿಖೆ ಮಾಡದೆಯೇ ಟೆರರಿಸ್ಟ್ ಅಂತ ಹೇಗೆ ಘೋಷಣೆ ಮಾಡಿದ್ರಿ? ಎಂದು ಪ್ರಶ್ನಿಸಿದ್ದಾರೆ.

ಪ್ರೆಸ್ ಕ್ಲಬ್ ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮುಂಬೈ ಟೆರರಿಸ್ಟ್ ಅಟ್ಯಾಕ್ ತರಹದ ಘಟನೆ ಆಗಿತ್ತಾ ಅದು? ಕಾಶ್ಮೀರದ ಪುಲ್ವಾಮಾ ತರಹದ ಘಟನೆ ಆಗಿತ್ತಾ ಅದು? ಅದನ್ನು ಹೇಗೆ ಪ್ರೊಜೆಕ್ಟ್ ಮಾಡಿದ್ದೀರಿ ನೀವು? ಡಿಜಿ ಏಕೆ ಅಷ್ಟು ಸ್ಪೀಡ್ ಆಗಿ ಟ್ವೀಟ್ ಮಾಡಿದ್ದು? ಎಂದು ಪ್ರಶ್ನಿಸಿದರು.

ಬೆಂಗಳೂರಿನ ವೋಟರ್ ಐಡಿ ಹಗರಣದ ವಿಷಯನ್ನು ಬಿಜೆಪಿ ಡೈವರ್ಟ್ ಮಾಡಿದೆ. ಶಿವಮೊಗ್ಗಕ್ಕೆ, ಮಂಗಳೂರು, ಮಲೆನಾಡು ಭಾಗಕ್ಕೆ ಯಾಕೆ ತನಿಖೆ ಹೋಗಲ್ಲ. ಎಲ್ಲಾ ಬೆಂಗಳೂರಿನಲ್ಲೇ ತನಿಖೆ ಆಗುತ್ತಿದೆ. ಜನರು ದಡ್ಡರಾ? ಜನರ ಭಾವನೆಗಳ ಮೇಲೆ ಸರ್ಕಾರ ಆಟ ಆಡುತ್ತಿದೆ ಎಂದು ಆಕ್ರೋಶ ಹೊರ ಹಾಕಿದರು.