ಪತ್ನಿಯೊಂದಿಗೆ ಜಗಳ.. 2 ವರ್ಷದ ಮಗುವನ್ನು 3ನೇ ಅಂತಸ್ತಿನಿಂದ ಎಸೆದ ತಂದೆ!

65
firstsuddi

ನವದೆಹಲಿ : ವ್ಯಕ್ತಿಯೊಬ್ಬ ತನ್ನ 2 ವರ್ಷದ ಮಗುವನ್ನು ಮನೆಯ 3ನೇ ಅಂತಸ್ತಿನಿಂದ ಎಸೆದು ತಾನು ಅಲ್ಲಿಂದ ಜಿಗಿದಿರುವ ಘಟನೆ ದೆಹಲಿಯ ಕಲ್ಕಾಜಿಯ ಕೊಳೆಗೇರಿಯಲ್ಲಿ ನಡೆದಿದೆ.

ಮಾನ್ ಸಿಂಗ್ ಎಂಬಾತ ತನ್ನ ಪತ್ನಿ ಪೂಜಾಳೊಂದಿಗೆ ಕಳೆದ ಕೆಲವು ತಿಂಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ. ಪೂಜಾ ತನ್ನ ಇಬ್ಬರು ಮಕ್ಕಳೊಂದಿಗೆ ಕಲ್ಕಾಜಿಯಲ್ಲಿರುವ ತನ್ನ ಅಜ್ಜಿಯ ಮನೆಯಲ್ಲಿ ವಾಸಿಸುತ್ತಿದ್ದಳು. ಕಳೆದ ರಾತ್ರಿ ಪೂಜಾಳನ್ನು ಭೇಟಿಯಾಗಲು ಮಾನ್ ಸಿಂಗ್ ಬಂದಿದ್ದ.

ಈ ವೇಳೆ ಮತ್ತೆ ದಂಪತಿ ನಡುವೆ ತೀವ್ರ ಜಗಳ ನಡೆದಿತ್ತು. ಈ ವೇಳೆ ಮಾನ್ ಸಿಂಗ್ ಕೋಪದಲ್ಲಿ ಅಲ್ಲೇ ಇದ್ದ ತನ್ನ 2 ವರ್ಷದ ಮಗುವನ್ನು ಬಾಲ್ಕನಿಯಿಂದ ಕೆಳಗೆ ಎಸೆದಿದ್ದಾನೆ. ಅದಾದ ಬಳಿಕ ತಾನು ಅಲ್ಲಿಂದ ಹಾರಿದ್ದಾನೆ. ತಂದೆ ಮತ್ತು ಮಗನಿಗೆ ಗಂಭೀರ ಗಾಯಗಳಾಗಿದ್ದು, ಆಲ್ ಇಂಡಿಯಾ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಮಾನ್ ಸಿಂಗ್ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.