ಚಿಕ್ಕಮಗಳೂರು :ಗಾಳಿ – ಮಳೆ ಹಿನ್ನೆಲೆ ಐದು ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ

3099

ಚಿಕ್ಕಮಗಳೂರು :ಮಲೆನಾಡಲ್ಲಿ ಮುಂದುವರೆದ ಗಾಳಿ- ಮಳೆ ಹಿನ್ನೆಲೆ  ಕಳಸ, ಮೂಡಿಗೆರೆ, ಕೊಪ್ಪ, ಶೃಂಗೇರಿ, ಎನ್.ಆರ್.ಪುರ  ಹಾಗೂ ಚಿಕ್ಕಮಗಳೂರು  ತಾಲೂಕಿನ ಆಹುತಿ, ಜಾಗರ, ವಸ್ತಾರೆ. ಅಲ್ದೂರು, ಖಾಂಡ್ಯ ಹೋಬಳಿಯ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಮುಂಜ್ರಾಗತ ಕ್ರಮವಾಗಿ ನಾಳೆ ರಜೆ ಘೋಷಣೆ ಮಾಡಲಾಗಿದ್ದು.  ರಸ್ತೆ ಬದಿಯ ಹಳ್ಳ ಕೊಳ್ಳಗಳು ತುಂಬಿ ಹರಿದಲ್ಲಿ ಶಾಲಾ ವಿದ್ಯಾರ್ಥಿಗಳ ಮುಕ್ತ ಸಂಚಾರಕ್ಕೆ ತೊಂದರೆಯಾಗುತ್ತದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್  ಅವರು   ರಜೆ ಘೋಷಣೆ ಮಾಡಿ ಆದೇಶಿಸಿದ್ದಾರೆ.