ಚಿಕ್ಕಮಗಳೂರು : ಕಡೂರು ತಾಲೂಕಿನ ಶ್ರೀರಾಂಪುರದ ಎಸ್.ಡಿ.ಮೋಹನ್ ಅವರು ಮಂಡಿಸಿದ ಮಹಾಪ್ರಬಂಧಕ್ಕೆ ಜೆಎಸ್‍ಎಸ್ ಸೈನ್ಸ್ ಅಂಡ್ ಟೆಕ್ನಾಲಜಿ ಯುನಿವರ್ಸಿಟಿ ಪಿಹೆಚ್‍ಡಿ ಪದವಿ ನೀಡಿದೆ.
ಶ್ರೀರಾಂಪುರದ ನಿವೃತ್ತ ಮುಖ್ಯ ಶಿಕ್ಷಕ ಧರ್ಮಪ್ಪ ಹಾಗೂ ನಾಗರತ್ನಮ್ಮ ದಂಪತಿಯ ಪುತ್ರರಾಗಿರುವ ಮೋಹನ್ ಅವರು ಕಂಪ್ಯೂಟರ್ ಸೈನ್ಸ್ ಪ್ರಾಧ್ಯಾಪಕ ಡಾ|| ಎಸ್.ಪಿ.ಶಿವಪ್ರಕಾಶ್ ಅವರ ಮಾರ್ಗದರ್ಶನದಲ್ಲಿ ಸರ್ವಿಸ್ ಓರಿಯೆಂಟೆಡ್ ನಾಲೆಡ್ಜ್ ಮಾಡೆಲ್ ಫಾರ್ ಆಬ್ಜೆಕ್ಟ್ ಇಂಟರಾಕ್ಷನ್ ಇನ್ ಸೋಶಿಯಲ್ ಇಂಟರ್‍ನೆಟ್ ಆಫ್ ಥಿಂಗ್ಸ್ ವಿಷಯ ಕುರಿತು ಮಹಾ ಪ್ರಬಂಧ ಮಂಡಿಸಿದ್ದರು.
ಮುಂದಿನ ತಿಂಗಳು ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ ಘಟಿಕೋತ್ಸವದಲ್ಲಿ ಮೋಹನ್ ಅವರು ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಲಿದ್ದಾರೆ.










