ಇಟಲಿ ಕಾಂಗ್ರೆಸ್‍ನ ಒಂದು ನಾಯಿಯೂ ಭಾರತ ಪರ ಬೊಗಳಿಲ್ಲ.. ಚೀನಾ, ಪಾಕ್ ಪರ ಬೊಗಳುತ್ತೆ : ಸಿ.ಟಿ.ರವಿ

57
firstsuddi

ಬೆಳಗಾವಿ : ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿಯ ಒಂದು ನಾಯಿಯೂ ಭಾಗವಹಿಸಿಲ್ಲ ಎಂಬ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿರುಗೇಟು ನೀಡಿದರು.

ನಗರದಲ್ಲಿ ಮಾತನಾಡಿದ ಸಿ.ಟಿ.ರವಿ, ಇಟಲಿ ಕಾಂಗ್ರೆಸ್ ನ ಒಂದು ನಾಯಿಯೂ ಭಾರತ ಪರ ಬೊಗಳಿಲ್ಲ. ಅದು ಚೀನಾ ಮತ್ತು ಪಾಕ್ ಪರ ಬೊಗಳುತ್ತೆ. ಭಾರತದ ರಕ್ಷಣೆ ಕೆಲಸ ಮಾಡಿಲ್ಲ. ಅದು ಚೀನಾ, ಪಾಕಿಸ್ತಾನದ ಎಂಜಲು ತಿಂದಿದೆ ಎಂದು ವಾಗ್ದಾಳಿ ನಡೆಸಿದರು.

ಪಾಕಿಸ್ತಾನ ಪರವಾಗಿ ಬೊಗಳುವ ನಾಯಿಯನ್ನು ಸಾಕಿದ್ದೀರಿ. ಈಗಿರೋದು ನಾಯಿ ಮಹಾತ್ಮ ಗಾಂಧಿ ಕಾಲದ ಕಾಂಗ್ರೆಸ್ ನಾಯಿ ಅಲ್ಲ. ಈಗ ಇರುವ ಇಟಲಿ ಕಾಂಗ್ರೆಸ್ ನಾಯಿ ಚೀನಾ, ಪಾಕ್ ಪರ ಬಾಲ ಅಲ್ಲಾಡಿಸುತ್ತಾ ಭಾರತ ಹಾಗೂ ಭಾರತೀಯ ಸೈನ್ಯದ ವಿರುದ್ಧ ಬೊಗಳುತ್ತೆ. ಸರ್ಜಿಕಲ್ ಸ್ಟ್ರೈಕ್ ವಿರುದ್ಧ ಬೊಗಳುತ್ತೆ. ಖರ್ಗೆಯವರೇ ಎಚ್ಚರವಾಗಿರಿ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ಹರಿಹಾಯ್ದರು.

ಖರ್ಗೆಯವರೇ ಸ್ವಾತಂತ್ರ್ಯ ಸಿಕ್ಕಿರುವುದು ದೇಶ ಲೂಟಿ ಹೊಡೆಯಲಿಕ್ಕಾ? ಕಾಂಗ್ರೆಸ್ ನಾಯಿಗಳಿಗೂ ಫೈವ್ ಸ್ಟಾರ್ ಟ್ರೀಟ್ಮೆಂಟ್ ಸಿಗಬೇಕೆಂದು ಲೂಟಿ ಮಾಡಿದ್ದೀರಾ? ಸ್ವಾತಂತ್ರ್ಯ ಹೋರಾಟದ ಕಾಂಗ್ರೆಸ್ ಬೇರೆ, ಈಗಿನ ಕಾಂಗ್ರೆಸ್ ಬೇರೆ, ಈಗಿರುವುದು ಇಟಲಿ ಕಾಂಗ್ರೆಸ್ ಎಂದು ಕಿಡಿಕಾರಿದರು.