ರಾಯ್ಪುರ : 22 ವರ್ಷದ ಸೋಷಿಯಲ್ ಮೀಡಿಯಾ ತಾರೆಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಛತ್ತೀಸ್ ಗಢದ ರಾಯ್ ಗಢದಲ್ಲಿರುವ ತಮ್ಮ ನಿವಾಸದಲ್ಲಿ ಲೀನಾ ನಾಗವಂಶಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಿದ್ದು, ವರದಿ ಬಂದ ಬಳಿಕವೇ ಸಾವಿಗೆ ನಿಖರ ಕಾರಣ ಗೊತ್ತಾಗಲಿದೆ.
ದ್ವಿತೀಯ ವರ್ಷದ ಬಿ.ಕಾಂ ಪದವೀಧರೆಯಾಗಿರುವ ಲೀನಾ ರಾಯ್ ಗಢದ ವಿಹಾರ್ ಕಾಲೋನಿಯಲ್ಲಿ ವಾಸವಾಗಿದ್ದರು. ಲೀನಾ ಅವರು ಯೂಟ್ಯೂಬ್ ಸೇರಿ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಖ್ಯಾತಿ ಗಳಿಸಿದ್ದಾರೆ. ಇನ್ ಸ್ಟಾದಲ್ಲಿ ಸುಮಾರು 10 ಸಾವಿರ ಫಾಲೋವರ್ ಗಳನ್ನು ಇವರು ಹೊಂದಿದ್ದಾರೆ. ಈಕೆ ಶಾರ್ಟ್ ವೀಡಿಯೋ ಹಾಗೂ ರೀಲ್ಸ್ ಗಳನ್ನು ಮಾಡುವ ಮೂಲಕ ಫೇಮಸ್ ಆಗಿದ್ದರು.










