ಒಡಿಶಾದಲ್ಲಿ ಮತ್ತೋರ್ವ ರಷ್ಯಾ ವ್ಯಕ್ತಿ ಶವವಾಗಿ ಪತ್ತೆ – 15 ದಿನದಲ್ಲಿ 3ನೇ ಪ್ರಕರಣ…

50
firstsuddi

ಭುವನೇಶ್ವರ : ಒಡಿಶಾದಲ್ಲಿ ಇಂದು ಮತ್ತೋರ್ವ ರಷ್ಯಾ ವ್ಯಕ್ತಿ ಶವವಾಗಿ ಪತ್ತೆಯಾಗಿದ್ದು, ಕಳೆದ 15 ದಿನಗಳಲ್ಲಿ ನಡೆದ 3ನೇ ಘಟನೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಗತ್‌ಸಿಂಗ್‌ಪುರ ಜಿಲ್ಲೆಯ ಪಾರಾದೀಪ್ ಬಂದರಿನಲ್ಲಿ ಲಂಗರು ಹಾಕಲಾಗಿದ್ದ ಹಡಗಿನಲ್ಲಿ ರಷ್ಯಾ ವ್ಯಕ್ತಿಯ ಶವ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಸೆರ್ಗಿ ಮಿಲ್ಯಕೋವ್ (51) ಎಂದು ಗುರುತಿಸಲಾಗಿದೆ. ಹೃದಯಾಘಾತದಿಂದ ಆತ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಅವರು ಸರಕು ಸಾಗಣೆ ಹಡಗಿನ ಸಿಬ್ಬಂದಿಗಳಲ್ಲಿ ಒಬ್ಬರಾಗಿದ್ದರು ಎಂದು ತಿಳಿದು ಬಂದಿದೆ. ಮರಣೋತ್ತರ ಪರೀಕ್ಷೆಯ ನಂತರವಷ್ಟೇ ಅವರ ಸಾವಿಗೆ ಕಾರಣ ತಿಳಿಯಲಿದೆ.

ಡಿಸೆಂಬರ್ ನಲ್ಲಿ ದಕ್ಷಿಣ ಒಡಿಶಾದ ರಾಯಗಡ ಪಟ್ಟಣದಲ್ಲಿ ರಷ್ಯಾದ ಶಾಸಕ ಹಾಗೂ ಅವರ ಸ್ನೇಹಿತ ನಿಗೂಢವಾಗಿ ಸಾವನ್ನಪ್ಪಿದ್ದರು. ರಷ್ಯಾದಲ್ಲಿ ಶಾಸಕರಾಗಿರುವ ಪಾವೆಲ್ ಆಂಟೊವ್(65) ಅವರು ಡಿಸೆಂಬರ್ 24 ರಂದು ಹೋಟೆಲ್ ನ 3ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದರೆ, ಅವರ ಸ್ನೇಹಿತ ವ್ಲಾಡಿಮಿರ್ ಬಿಡೆನೋವ್(61) ಡಿಸೆಂಬರ್ 22 ರಂದು ಅವರ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸದ್ಯ ಎರಡೂ ಪ್ರಕರಣಗಳನ್ನು ಒಡಿಶಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.