ತರಬೇತಿ ವಿಮಾನ ಪತನ – ಪೈಲಟ್ ದುರ್ಮರಣ…

56
firstsuddi

ಭೋಪಾಲ್ : ತರಬೇತಿ ವಿಮಾನವೊಂದು ದೇವಾಲಯದ ಗೋಪುರಕ್ಕೆ ಅಪ್ಪಳಿಸಿ ಪತನವಾಗಿರುವ ಘಟನೆ ಮಧ್ಯಪ್ರದೇಶದ ರೇವಾ ಜಿಲ್ಲೆಯ ಡುಮ್ರಿ ಗ್ರಾಮದಲ್ಲಿ ಇಂದು ಮುಂಜಾನೆ ನಡೆದಿದೆ.

ವಿಮಾನದಲ್ಲಿ ಇಬ್ಬರು ಪೈಲಟ್ ಗಳಿದ್ದು, ಒಬ್ಬ ಪೈಲಟ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೊಬ್ಬ ಪೈಲಟ್ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.

ಈ ಬಗ್ಗೆ ರೇವಾ ಎಸ್ ಪಿ ನವನೀತ್ ಭಾಸಿನ್ ಮಾಹಿತಿ ನೀಡಿದ್ದು, ಅಪಘಾತಕ್ಕೊಳಗಾದ ವಿಮಾನ ತರಬೇತಿ ವಿಮಾನವಾಗಿದ್ದು, ಒಬ್ಬ ಪೈಲಟ್ ಸಾವನ್ನಪ್ಪಿದ್ದಾರೆ. ಮತ್ತೊಬ್ಬರು ಗಾಯಗೊಂಡಿದ್ದಾರೆ. ಗಾಯಗೊಂಡ ಪೈಲಟ್ ಅನ್ನು ಸಂಜಯ್ ಗಾಂಧಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದ್ದು, ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಮೇಲ್ನೋಟಕ್ಕೆ ಅಪಘಾತಕ್ಕೆ ಕಾರಣ ಹವಾಮಾನ ವೈಪರೀತ್ಯ ಎನ್ನಲಾಗಿದೆ.