ನಾನು ಎಂದಿಗೂ ಲಾಡೆನ್​ನನ್ನು ಭೇಟಿಯಾಗಿಲ್ಲ : ಅಲ್​ಖೈದಾ ನಂಟನ್ನು ತಳ್ಳಿ ಹಾಕಿದ ಜಾಗತಿಕ ಉಗ್ರ.

43
firstsuddi

ಮುಂಬೈ: ವಿಶ್ವಸಂಸ್ಥೆಯಿಂದ ಜಾಗತಿಕ ಭಯೋತ್ಪಾದಕ ಎಂದು ಹೆಸರಿಸಲಾದ ಲಷ್ಕರ್-ಎ-ತೈಬಾ ಭಯೋತ್ಪಾದಕ ಅಬ್ದುಲ್ ರೆಹಮಾನ್ ಮಕ್ಕಿ ತನಗೂ, ಅಲ್-ಖೈದಾ ಸಂಘಟನೆಗೂ ಯಾವುದೇ ಸಂಬಂಧವಿಲ್ಲ. ನಾನು ಎಂದೂ ಒಸಾಮಾ ಬಿನ್ ಲಾಡೆನ್​ನನ್ನು ಭೇಟಿ ಮಾಡಿಲ್ಲ ಎಂದು ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾನೆ.

ನಾನು ಒಸಾಮಾ ಬಿನ್ ಲಾಡೆನ್, ಅಯ್ಮನ್ ಅಲ್-ಜವಾಹಿರಿ ಅಥವಾ ಅಬ್ದುಲ್ಲಾ ಅಜಮ್ ಅವರನ್ನು ಭೇಟಿಯಾಗಿದ್ದೇನೆ ಎಂದು ಕೆಲವು ವರದಿಗಳು ಹರಿದಾಡುತ್ತಿವೆ. ಆದರೆ, ನಾನು ಅವರ್ಯಾರನ್ನೂ ಭೇಟಿಯಾಗಿಲ್ಲ. ಹಾಗೇ, ಅಬ್ದುಲ್ಲಾ ಅಜಮ್, ಅಮಾನ್ ಅಲ್ ಜವಾಹಿರಿ ಅಥವಾ ಒಸಾಮಾ ಬಿನ್ ಲಾಡೆನ್ ಅವರೊಂದಿಗೆ ಯಾವುದೇ ಸಂಪರ್ಕವನ್ನು ಹೊಂದಿಲ್ಲ. ಭಾರತ ಸರ್ಕಾರ ನನ್ನ ವಿರುದ್ಧ ತಪ್ಪು ಮಾಹಿತಿ ನೀಡಿದೆ. ಇದರ ಆಧಾರದ ಮೇಲೆ ನನ್ನನ್ನು ಜಾಗತಿಕ ಭಯೋತ್ಪಾದಕರ ಪಟ್ಟಿಗೆ ಸೇರಿಸಲಾಗಿದೆ ಎಂದು ಮಕ್ಕಿ ಹೇಳಿದ್ದಾನೆ.

ವಿಶ್ವ ಸಂಸ್ಥೆ ಭದ್ರತಾ ಮಂಡಳಿಯ 1267 ISIL (ದಯೆಶ್) ಮತ್ತು ಅಲ್ ಖೈದಾ ನಿರ್ಬಂಧಗಳ ಸಮಿತಿಯು ಸೋಮವಾರ ತನ್ನ ಜಾಗತಿಕ ಭಯೋತ್ಪಾದಕರ ಪಟ್ಟಿಗೆ 68 ವರ್ಷದ ಅಬ್ದುಲ್ ರೆಹಮಾನ್ ಮಕ್ಕಿಯನ್ನು ಸೇರಿಸಿತ್ತು. ಆತನ ಆಸ್ತಿ ಫ್ರೀಜ್, ಪ್ರಯಾಣ ನಿಷೇಧ ಮತ್ತು ಶಸ್ತ್ರಾಸ್ತ್ರ ನಿರ್ಬಂಧಕ್ಕೆ ಒಳಪಡಿಸಿತ್ತು.