ರೈತರಿಗೆ ಕನ್ಯೆ ಕೊಡಲಿ ; ರಥೋತ್ಸವದಲ್ಲಿ ರೈತನ ಹರಕೆ…

69
firstsuddi

ವಿಜಯನಗರ : ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಚಿಮ್ಮನಹಳ್ಳಿ ದುರ್ಗಾಂಬಿಕೆ ರಥೋತ್ಸವದಲ್ಲಿ ಯುವ ರೈತನೊಬ್ಬ ರೈತರಿಗೆ ಕನ್ಯೆ ಕೊಡಲಿ ಎಂದು ಬಾಳೆಹಣ್ಣಿನಲ್ಲಿ ಬರೆದು ಹರಕೆ ತೀರಿಸಿದ್ದಾನೆ.

ಹರಿಕೆಯಲ್ಲಿ ಏನಿದೆ?: ತಾಯಿ ದುರ್ಗಾಂಬಿಕೆ ಜನರ ಮನಸ್ಸು ಬದಲಾಯಿಸಿ, ರೈತರಿಗೂ ಮದುವೆಯಾಗಲು ಹೆಣ್ಣು ಸಿಗಲಿ. ಎಲ್ಲರಿಗೂ ಈ ರೀತಿಯ ಮನಸ್ಥಿತಿಯನ್ನು ಕರುಣಿಸು ಎಂದು ಬಾಳೆಹಣ್ಣಿನ ಮೇಲೆ ಬರೆದಿದ್ದಾನೆ. ಇದನ್ನು ನಂತರ ರಥೋತ್ಸವದ ವೇಳೆ ದುರ್ಗಾದೇವಿ ರಥಕ್ಕೆ ಸಮರ್ಪಿಸಿ ತನ್ನ ಹರಕೆಯನ್ನು ಸಮರ್ಪಣೆ ಮಾಡಿದ್ದಾನೆ. ಈಗ ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.