ಪ್ರೇಮಿಗಳ ದಿನಾಚರಣೆಗೆ ವಿರೋಧ – ನಾಯಿಗಳಿಗೆ ಮದುವೆ ಮಾಡಿಸಿದ ಹಿಂದೂಪರ ಸಂಘಟನೆ…

62
firstsuddi

ಚೆನ್ನೈ : ಇಂದು ಪ್ರೇಮಿಗಳ ದಿನ. ಪ್ರೇಮಿಗಳು ಇಡೀ ದಿನವನ್ನು ಅರ್ಥಪೂರ್ಣವಾಗಿಸಲು ಹಾತೊರೆಯುತ್ತಿದ್ದಾರೆ. ಆದರೆ ಹಿಂದೂಪರ ಸಂಘಟನೆಯೊಂದು ಪ್ರೇಮಿಗಳ ದಿನಾಚರಣೆಯನ್ನು ವಿರೋಧಿಸಿ ಬೀದಿ ನಾಯಿಗಳಿಗೆ ಮದುವೆ ಮಾಡಿಸಿರುವ ಘಟನೆ ತಮಿಳುನಾಡಿನ ಶಿವಗಂಗಾದಲ್ಲಿ ನಡೆದಿದೆ.

ನಿನ್ನೆ ಹಿಂದೂ ಮುನ್ನಾನಿಯ ಕಾರ್ಯಕರ್ತರು 2 ಬೀದಿ ನಾಯಿಗಳನ್ನು ಕರೆತಂದು, ಅದಕ್ಕೆ ಬಟ್ಟೆ ಹೊದಿಸಿ, ಹಾರ ಹಾಕಿ, ಅಣುಕು ಮದುವೆ ಮಾಡಿಸಿದ್ದಾರೆ. ಇದು ಭಾರತದ ಸಂಸ್ಕೃತಿಗೆ ವಿರೋಧವಾಗಿದೆ ಎಂದು ಹೇಳಿದೆ.

ಪ್ರೇಮಿಗಳ ದಿನದಂದು ಸಾರ್ವಜನಿಕ ಸ್ಥಳಗಳಲ್ಲಿ ಪ್ರೇಮಿಗಳು ಅನುಚಿತವಾಗಿ ವರ್ತಿಸುತ್ತಾರೆ. ಇದನ್ನು ವಿರೋಧಿಸಿ ಬೀದಿ ನಾಯಿಗಳ ಮದುವೆಯನ್ನು ಮಾಡಲಾಗಿದೆ ಎಂದು ಹಿಂದೂ ಮುನ್ನಾನಿ ಕಾರ್ಯಕರ್ತರು ಹೇಳಿದ್ದಾರೆ. ಈ ಹಿಂದೆಯೂ ಸಂಘಟನೆ ಪ್ರತಿ ವರ್ಷ ಪ್ರೇಮಿಗಳ ದಿನವನ್ನು ವಿರೋಧಿಸಿ ವಿವಿಧ ರೂಪದಲ್ಲಿ ಪ್ರತಿಭಟನೆ ನಡೆಸಿದೆ.