ಸಾರ್ವಜನಿಕರಿಂದ ತರಾಟೆ – ಶಂಕುಸ್ಥಾಪನೆ ನೆರವೇರಿಸದೇ ಕಾಗೇರಿ ವಾಪಸ್…

57
firstsuddi

ಉತ್ತರ ಕನ್ನಡ : ರಸ್ತೆ ಕಾಮಗಾರಿ ಶಂಕುಸ್ಥಾಪನೆಗೆ ಬಂದಿದ್ದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಸಾರ್ವಜನಿಕರು ತರಾಟೆಗೆ ತೆಗೆದುಕೊಂಡ ಘಟನೆ ಜಿಲ್ಲೆಯ ಸಿದ್ದಾಪುರದ ಬೇಡ್ಕಣಿಯಲ್ಲಿ ನಡೆದಿದೆ.

ಕೇವಲ 350 ಮೀಟರ್ ಸಿಮೆಂಟ್ ರಸ್ತೆ ಕಾಮಗಾರಿಯಾಗಿದೆ. ಅದನ್ನ 1000 ಮೀಟರ್ ಮಾಡುವಂತೆ ಸಾರ್ವಜನಿಕರು ಪಟ್ಟು ಹಿಡಿದಿದ್ದಾರೆ. ಜೊತೆಗೆ ಸಿಮೆಂಟ್ ರಸ್ತೆ ಬದಲಿಗೆ ಟಾರ್ ರಸ್ತೆ ಮಾಡುವಂತೆ ಕಾಗೇರಿಯವರ ಬಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಮಾಡಿರುವ ರಸ್ತೆಯ ಗುಣಮಟ್ಟ ಕೂಡ ಕಳಪೆ ಆಗಿದೆ ಎಂದು ಆರೋಪಿಸಿದ್ದಾರೆ. ಸಾರ್ವಜನಿಕರ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಶಂಕುಸ್ಥಾಪನೆ ನೆರವೇರಿಸದೇ ಇಂಜಿನಿಯರ್ ಕಡೆಯಿಂದ ಕಾಮಗಾರಿಯ ಎಸ್ಟಿಮೇಟ್ ಕೇಳಿ ವಾಪಾಸ್ ತೆರೆಳಿದ್ದಾರೆ.