ನವದೆಹಲಿ : ವಾಣಿಜ್ಯ ಬಳಕೆಯ ಎಲ್‍ಪಿಜಿ ಸಿಲಿಂಡರ್ ಬೆಲೆಗಳಲ್ಲಿ ಭಾರೀ ಇಳಿಕೆಯಾಗಿದೆ.
19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 91 ರೂಪಾಯಿ 50 ಪೈಸೆ ಕಡಿಮೆಯಾಗಿದೆ. ಆದರೆ, ಗೃಹಬಳಕೆ ಎಲ್‍ಪಿಜಿ ಸಿಲಿಂಡರ್ ಗಳ ಬೆಲೆಯಲ್ಲಿ ಬದಲಾವಣೆಯಾಗಿಲ್ಲ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್ ಪಿಜಿ ಸಿಲಿಂಡರ್ ಗಳ ಬೆಲೆ 2,028 ರೂ. ಆಗಿದೆ. ಬೆಂಗಳೂರಿನಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್ ಗಳ ಬೆಲೆಯೂ 1115.5 ರೂ. ಆಗಿದೆ. ಮುಂಬೈನಲ್ಲಿ 1112.5 ರೂ., ಕೋಲ್ಕತ್ತಾದಲ್ಲಿ 1,129 ಹಾಗೂ ಚೆನ್ನೈನಲ್ಲಿ 1118.5 ರೂ.ನಲ್ಲಿ ಖರೀದಿಸಬಹುದಾಗಿದೆ.
ಮಾರ್ಚ್ 1ರಂದು ಕಮರ್ಷಿಯಲ್ ಸಿಲಿಂಡರ್ ಗಳ ಬೆಲೆ 350 ರೂಪಾಯಿ 50 ಪೈಸೆ ಹಾಗೂ ಗೃಹ ಬಳಕೆ ಸಿಲಿಂಡರ್ ಬೆಲೆ 50 ರೂಪಾಯಿ ಹೆಚ್ಚಳವಾಗಿತ್ತು. ಜನವರಿಯಲ್ಲಿ ಕಮರ್ಷಿಯಲ್ ಸಿಲಿಂಡರ್ ಬೆಲೆ 25 ರೂಪಾಯಿ ಹೆಚ್ಚಳವಾಗಿತ್ತು.










