ನೇಪ್ಯಿಡಾವ್: ಮ್ಯಾನ್ಮಾರ್ ಮಿಲಿಟರಿ ಆಡಳಿತ ವಿರೋಧಿಸಿ ದಂಗೆ ಎದ್ದಿದ್ದ ಜನರ ಮೇಲೆ ನಡೆಸಿದ ವೈಮಾನಿಕ ದಾಳಿಯಿಂದ ನಿನ್ನೆ ಮಧ್ಯ ಮ್ಯಾನ್ಮಾರ್ನಲ್ಲಿ ಮಕ್ಕಳು ಸೇರಿದಂತೆ 100ಕ್ಕೂ ಅಧಿಕ ಜನ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹಿಂಸಾತ್ಮಕ ದಾಳಿಗಳ ಆಡಳಿತವು ಮಾನವ ಜೀವನವನ್ನು ಕಡೆಗಣಿಸುತ್ತದೆ. ಅಂತಹ ಆಡಳಿತವನ್ನು ಅಮೆರಿಕ ಹಾಗೂ ಹಲವಾರು ದೇಶಗಳು ಬಲವಾಗಿ ಖಂಡಿಸಿವೆ.
ಮ್ಯಾನ್ಮಾರ್ ಮಿಲಿಟರಿ ಮತ್ತೊಮ್ಮೆ ಜನರಿಗೆ ಸೂಕ್ತ ಆಡಳಿತ ಒದಗಿಸದೆ ಯುದ್ಧದ ನಡವಳಿಕೆಯಿಂದ ನಾಗರಿಕರನ್ನು ನಿರ್ಲಕ್ಷಿಸಿದೆ ಎಂದು ಟರ್ಕ್ ಆರೋಪಿಸಿದೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮುಖ್ಯಸ್ಥ ವೋಲ್ಕರ್ ಟರ್ಕ್ ಅವರು ವೈಮಾನಿಕ ದಾಳಿಯಿಂದ ನನಗೆ ಗಾಬರಿಯಾಗಿದೆ. ವಿಶ್ವದ ಎಲ್ಲಾ ದೇಶಗಳು ದಾಳಿಯ ಹೊಣೆಗಾರರನ್ನು ಖಂಡಿಸಿ ನ್ಯಾಯಕ್ಕೆ ಒತ್ತಾಯಿಸಬೇಕು ಎಂದು ಮನವಿ ಮಾಡಿದ್ದಾರೆ.
ಮ್ಯಾನ್ಮಾರ್ನಲ್ಲಿ ಆಂಗ್ ಸಾನ್ ಸೂಕಿ ನೇತೃತ್ವದ ಚುನಾಯಿತ ಸರ್ಕಾರ ಪದ್ಯಚುತಗೊಳಿಸಿ 2021ರ ಫೆಬ್ರವರಿಯಲ್ಲಿ ಸೇನೆ ಅಧಿಕಾರ ಹಿಡಿದಿತ್ತು. ಇದನ್ನು ವಿರೋಧಿಸಿ ಅಲ್ಲಿನ ಜನ ನಿರಂತರವಾಗಿ ಪ್ರತಿಭಟನೆಯಲ್ಲಿ ತೊಡಗಿದ್ದರು. ಈವರೆಗೆ ಮಿಲಿಟರಿ ದಾಳಿಗೆ 3,000ಕ್ಕೂ ಹೆಚ್ಚು ನಾಗರಿಕರು ಸಾವಿಗೀಡಾಗಿದ್ದಾರೆ ಎಂದು ಅಂದಾಜಿಸಲಾಗಿದೆ.










