ವೀಕೆಂಡ್ ವಿತ್ ರಮೇಶ್ ಸೀಸನ್ 5ರ ಅತಿಥಿಯಾಗಿ ಡಾಲಿ ಧನಂಜಯ್.

57
firstsuddi

ಕನ್ನಡದ ಜನಪ್ರಿಯ ಕಾರ್ಯಕ್ರಮ ವೀಕೆಂಡ್ ವಿತ್ ರಮೇಶ್‍ ಸೀಸನ್ 5 ಆರಂಭಗೊಂಡು ಮೂರು ವಾರಗಳು ಕಳೆದಿವೆ. ಇದೀಗ ಈ ವಾರ ಅತಿಥಿಯಾಗಿ ಧನಂಜಯ್ ಸಾಧಕರ ಕುರ್ಚಿ ಏರಿದ್ದಾರೆ. ಆ ಪ್ರೋಮೋವನ್ನು ಜೀ ಕನ್ನಡ ವಾಹಿನಿಯು ರಿಲೀಸ್ ಕೂಡ ಮಾಡಿದೆ.

ಪ್ರೋಮೋದಲ್ಲಿ ಹತ್ತಾರು ವಿಷಯಗಳನ್ನು ಹೇಳುವ ಪ್ರಯತ್ನ ಮಾಡಲಾಗಿದೆ. ಡಾಲಿ ಬಾಲ್ಯ, ಬಾಲ್ಯದ ಗೆಳೆಯರು, ಕುಟುಂಬ ಮತ್ತು ಅವರ ಸಹೋದರಿಯ ಕಥೆಯನ್ನೂ ಸೂಕ್ಷ್ಮವಾಗಿ ಹೇಳಲಾಗಿದೆ. ಕುರ್ಚಿಯ ಮೇಲೆ ಕೂತು ತನ್ನ ಬದುಕನ್ನು ನೆನಪಿಸಿಕೊಂಡಿರುವ ಡಾಲಿ ಕಣ್ಣೀರಿಟ್ಟಿದ್ದಾರೆ.

ಧನಂಜಯ್ ಇಂಜಿನಿಯರಿಂಗ್ ಓದಿಕೊಂಡಿದ್ದವರು. ಬಣ್ಣದ ಮೇಲಿನ ಗೀಳಿನಿಂದಾಗಿ ರಂಗಭೂಮಿಗೆ ಎಂಟ್ರಿ ಕೊಟ್ಟವರು. ಮೈಸೂರಿನಲ್ಲಿ ರಂಗತಂಡ ಕಟ್ಟಿಕೊಂಡು ಹಲವಾರು ನಾಟಕಗಳಲ್ಲಿ ಅಭಿನಯಿಸಿದವರು. ಅಲ್ಲದೇ, ಕಿರುಚಿತ್ರದ ಮೂಲಕ ಚಿತ್ರೋದ್ಯಮಕ್ಕೆ ಕಾಲಿಟ್ಟ ಧನಂಜಯ, ಇದೀಗ ಸ್ಟಾರ್ ನಟರಾಗಿದ್ದಾರೆ.

ಡಾಲಿ ಧನಂಜಯ್ ಅವರು ಈಗಾಗಲೇ ಕೆಲ ಯಶಸ್ವಿ ಚಿತ್ರಗಳನ್ನು ಚಿತ್ರರಂಗಕ್ಕೆ ನೀಡಿದ್ದಾರೆ. ತಮ್ಮ ಅಮೋಘ ಅಭಿನಯದ ಮೂಲಕ ಹಲವಾರು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಈ ಹಿನ್ನಲೆ ಸಹಜವಾಗಿ ಈ ಕಾರ್ಯಕ್ರಮದ ಮೇಲೆ ವೀಕ್ಷಕರ ನೀರಿಕ್ಷೆ ಇದೆ.