ಬಿಬಿಸಿ ಇಂಡಿಯಾ ವಿರುದ್ಧ ಪ್ರಕರಣ ದಾಖಲಿಸಿದ ಇಡಿ…

47
firstsuddi

ನವದೆಹಲಿ: ವಿದೇಶಿ ವಿನಿಮಯ ಉಲ್ಲಂಘನೆ ಆರೋಪದ ಮೇಲೆ ಬಿಬಿಸಿ ಇಂಡಿಯಾ ವಿರುದ್ಧ ಜಾರಿ ನಿರ್ದೇಶನಾಲಯ ಇಂದು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಪ್ರಕರಣವನ್ನು ದಾಖಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಫೆಡರಲ್ ತನಿಖಾ ಸಂಸ್ಥೆ ಇಡಿಯು ಫೆಮಾದ ನಿಬಂಧನೆಗಳ ಅಡಿಯಲ್ಲಿ ಕೆಲವು ಕಂಪನಿಯ ಕಾರ್ಯನಿರ್ವಾಹಕರ ದಾಖಲೆಗಳು ಮತ್ತು ಹೇಳಿಕೆಗಳನ್ನು ದಾಖಲಿಸಲು ಸಹ ಕರೆ ನೀಡಿದೆ. ತನಿಖೆಯು ಮೂಲಭೂತವಾಗಿ ಕಂಪನಿಯ ಉದ್ದೇಶಿತ ವಿದೇಶಿ ನೇರ ಹೂಡಿಕೆ(ಎಫ್‍ಡಿಐ) ಉಲ್ಲಂಘನೆ ಆರೋಪದ ವಿರುದ್ಧವಾಗಿದೆ ಎಂದು ವರದಿಗಳು ಹೇಳಿವೆ.

ಫೆಬ್ರವರಿಯಲ್ಲಿ ಆದಾಯ ತೆರಿಗೆ ಇಲಾಖೆ ದೆಹಲಿಯ ಬಿಬಿಸಿ ಕಚೇರಿ ಆವರಣದಲ್ಲಿ ಪರಿಶೀಲನೆ ನಡೆಸಿತ್ತು. ಆದಾಯ ತೆರಿಗೆ ಅಧಿಕಾರಿಗಳು ಬಿಬಿಸಿಯ ಲೆಕ್ಕಪತ್ರಗಳಲ್ಲಿ ಅಕ್ರಮಗಳನ್ನು ಬಹಿರಂಗಪಡಿಸಿದ್ದಾರೆ. ವಿವಿಧ ಬಿಬಿಸಿ ಗ್ರೂಪ್ ಘಟಕಗಳು ತೋರಿಸಿರುವ ಆದಾಯ ಮತ್ತು ಲಾಭಗಳು ಭಾರತದಲ್ಲಿನ ಅವರ ಕಾರ್ಯಾಚರಣೆಗಳ ಪ್ರಮಾಣಕ್ಕೆ ಅನುಗುಣವಾಗಿಲ್ಲ ಮತ್ತು ತೆರಿಗೆಯನ್ನು ಪಾವತಿಸಲಾಗಿಲ್ಲ ಎಂದು ಕಂಡುಬಂದ ಹಿನ್ನೆಲೆಯಲ್ಲಿ ತನಿಖಾ ಸಂಸ್ಥೆಗಳು ಈ ಕ್ರಮಕ್ಕೆ ಮುಂದಾಗಿದೆ.