ತಾಲ್ಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಚಿನ್ನಿಗ ಕಾಲೇಜು…

76
firstsuddi

ಮೂಡಿಗೆರೆ: ತಾಲ್ಲೂಕಿನ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಚಿನ್ನಿಗದ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಥಮ ಸ್ಥಾನ ಪಡೆದಿದೆ.

ವಿದ್ಯಾರ್ಥಿನಿ ವಂದನಾ ವಿ.ಎಸ್. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ 561 (95.5%) ಅಂಕ ಪಡೆದಿದ್ದು ತಾಲ್ಲೂಕಿನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಮತ್ತೋರ್ವ ವಿದ್ಯಾರ್ಥಿನಿ ಜ್ಯೋತಿ 525 (87.33%) ಅಂಕ ಪಡೆದಿದ್ದಾರೆ. ಕಾಲೇಜಿನ 12 ವಿದ್ಯಾರ್ಥಿಗಳ ಪ್ರಥಮ ದರ್ಜೆ 13 ವಿದ್ಯಾರ್ಥಿಗಳು ದ್ವಿತೀಯ ದರ್ಜೆ, 3 ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ಉತೀರ್ಣರಾಗಿದ್ದಾರೆ. ಕಾಲೇಜಿನ ಕಲಾ ವಿಭಾಗದಲ್ಲಿ 80%, ವಾಣಿಜ್ಯ ವಿಭಾಗದಲ್ಲಿ 100% ಫಲಿತಾಂಶ ಬಂದಿದೆ. ವಿದ್ಯಾರ್ಥಿಗಳಿಗೆ ಕಾಲೇಜು ಪ್ರಾಂಶುಪಾಲರಾದ ಧರ್ಮಶೆಟ್ಟಿ, ಉಪನ್ಯಾಸಕರಾದ ರಾಜೇಶ್, ದೀಪ್ತಿಕುಮಾರ್, ಸುನೀತಾ, ಇಂಚರ, ಆಶಾ, ಪ್ರದೀಪ್ , ಕಾಲೇಜು ಅಭಿವೃದ್ದಿ ಮಂಡಳಿ ಅಧ್ಯಕ್ಷರಾದ ಸುನೀಲ್ ಕುಮಾರ್ ನಿಡಗೋಡು ಅಭಿನಂದನೆ ತಿಳಿಸಿದ್ದಾರೆ.