ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ ಭಾರೀ ಇಳಿಕೆ!

58
firstsuddi

ನವದೆಹಲಿ: ತೈಲ ಮಾರುಕಟ್ಟೆ ಕಂಪನಿಗಳು(ಒಎಂಸಿ) 2023ರ ಮೇ 1 ರಂದು ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಭಾರೀ ಇಳಿಕೆಯನ್ನು ಮಾಡಿವೆ.

ಕಾರ್ಮಿಕರ ದಿನದಂದು ವಾಣಿಜ್ಯ ಬಳಕೆಯ 19 ಕೆಜಿ ತೂಕದ ಎಲ್‌ಪಿಜಿ ಸಿಲಿಂಡರ್ ಬೆಲೆ ಭಾರೀ ಇಳಿಕೆ ಕಂಡಿದ್ದು, 171. 50 ರೂ. ಕಡಿತಗೊಂಡಿದೆ. ಈ ಆದೇಶವು ಇಂದಿನಿಂದಲೇ ಜಾರಿಗೆ ಬರಲಿದೆ. ಪ್ರಸ್ತುತ 14.2 ಕೆಜಿ ಗೃಹಬಳಕೆಯ ಅಡುಗೆ ಅನಿಲದ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ.

ತೈಲ ಕಂಪನಿಗಳು ಜೆಟ್ ಇಂಧನ (ವಾಯು ಇಂಧನ) ಬೆಲೆಯನ್ನು 2415 ರೂ.ವರೆಗೆ ಕಡಿಮೆ ಮಾಡಿದೆ. ಹೊಸ ದರಗಳು ಮೇ 1 ರಿಂದ ಜಾರಿಗೆ ಬಂದಿವೆ. ದೆಹಲಿಯಲ್ಲಿ 19 ಕೆ.ಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಗಳ ಬೆಲೆ 1856.50 ರೂ. ಆಗಿದೆ. ಈ ಹಿಂದೆ 2,028 ರೂ. ಇತ್ತು. ಕೋಲ್ಕತ್ತಾದಲ್ಲಿ 2132 ರೂ.ಗೆ ಸಿಗುವ ಸಿಲಿಂಡರ್ ಈಗ 1960.50 ರೂ.ಗೆ ಲಭ್ಯವಾಗಲಿದೆ.

ಮುಂಬೈನಲ್ಲಿ ಈ ಮೊದಲು ವಾಣಿಜ್ಯ ಗ್ಯಾಸ್ ಸಿಲಿಂಡರ್ 1980 ರೂ. ಗೆ ಸಿಗುತ್ತಿತ್ತು. ಈಗ ಅದು 1808.50 ರೂ.ಗೆ ಇಳಿದಿದೆ. ಮತ್ತೊಂದೆಡೆ, ಚೆನ್ನೈನಲ್ಲಿ 2192.50 ರೂ.ಗಳ ಸಿಲಿಂಡರ್ ಗೆ ಈಗ 2021.50 ರೂ.ಗಳನ್ನು ಪಾವತಿಸಬೇಕಾಗುತ್ತದೆ.