ಬಿಜೆಪಿ ಪರ ಬಿರುಸಿನ ಚುನಾವಣಾ ಪ್ರಚಾರ ನಡೆಸಿದ ಬಿ.ಎಸ್. ಸೋಮಶೇಖರ್.

61
firstsuddi

ಚಿಕ್ಕಮಗಳೂರು: ನೇಕಾರರ ಒಕ್ಕೂಟದ ರಾಜ್ಯಾಧ್ಯಕ್ಷ ಬಿ.ಎಸ್. ಸೋಮಶೇಖರ್ ಅವರು ನಗರದಲ್ಲಿ ಇಂದು ಬಿಜೆಪಿ ಪರ ಬಿರುಸಿನ ಚುನಾವಣಾ ಪ್ರಚಾರ ನಡೆಸಿದರು.

ಒಕ್ಕೂಟದ ಜಿಲ್ಲಾ ಪದಾಧಿಕಾರಿಗಳೊಂದಿಗೆ ನೇಕಾರ ಬೀದಿಯ ನೇಕಾರ ಸಮುದಾಯದವರ ಮನೆ ಮನೆಗೆ ತೆರಳಿ ಶಾಸಕ ಸಿ.ಟಿ. ರವಿ ಪರ ಮತಯಾಚನೆ ಮಾಡಿದರು.

ಈ ವೇಳೆ ನೇಕಾರ ಸಮುದಾಯದವರೊಂದಿಗೆ ಮಾತುಕತೆ ನಡೆಸಿದ ಸೋಮಶೇಖರ್, ರಾಜ್ಯ ಬಿಜೆಪಿ ಸರ್ಕಾರ ನೇಕಾರ ಸಮುದಾಯದ ಏಳಿಗೆಗೆ ರೂಪಿಸಿರುವ ಯೋಜನೆಗಳನ್ನು ಮತ್ತು ಜನಾಂಗದ ಅಭಿವೃದ್ಧಿಗೆ ನೀಡಿರುವ ಕೊಡುಗೆಗಳನ್ನು ವಿವರಿಸಿದರು.

ಇದುವರೆಗೆ ಯಾವುದೇ ಸರ್ಕಾರಗಳು ಮಾಡದಷ್ಟು ಅಭಿವೃದ್ದಿ ಕೆಲಸಗಳನ್ನು ರಾಜ್ಯ ಬಿಜೆಪಿ ಸರ್ಕಾರ ಮಾಡಿದೆ, ಎಲ್ಲಾ ರಾಜಕೀಯ ಪಕ್ಷಗಳಿಂದ ನಿರ್ಲಕ್ಷ್ಯಕ್ಕೊಳಗಾಗಿದ್ದ ನೇಕಾರ ಸಮುದಾಯಕ್ಕೆ ಅನೇಕ ಕೊಡುಗೆಗಳನ್ನು ನೀಡಿದೆ ಎಂದು ತಿಳಿಸಿದರು.

ರಾಜ್ಯ ಬಿಜೆಪಿ ಸರ್ಕಾರ ನೇಕಾರರ ಅಭಿವೃದ್ದಿ ನಿಗಮವನ್ನು ಸ್ಥಾಪಿಸಿದೆ. 2ಲಕ್ಷ ಶೂನ್ಯ ಬಡ್ಡಿದರದಲ್ಲಿ ನೇಕಾರರಿಗೆ ಸಾಲ ನೀಡಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ನೇಕಾರರಿಗೆ ಸಹಾಯಧನ ನೀಡುವುದು ಸೇರಿದಂತೆ ಅವರ ಅಭಿವೃದ್ದಿಗೆ ಅನೇಕ ಕಾರ್ಯಕ್ರಮಗಳನ್ನು ನೀಡಿದೆ ಎಂದು ಹೇಳಿದರು.

ರಾಜ್ಯದಲ್ಲಿ 60ಲಕ್ಷದಷ್ಟು ಜನಸಂಖ್ಯೆ ಹೊಂದಿರುವ ನೇಕಾರ ಸಮುದಾಯ ಈ ಬಾರಿ ಬಿಜೆಪಿಯನ್ನು ಬೆಂಬಲಿಸಲಿದೆ ಎಂದು ಭರವಸೆ ನೀಡಿದರು.

ಜಿಲ್ಲಾ ನೇಕಾರರ ಒಕ್ಕೂಟದ ಕಾರ್ಯಾಧ್ಯಕ್ಷ ಎಚ್.ಎಂ. ನಾರಾಯಣ ಮಾತನಾಡಿ, ಶಾಸಕ ಸಿ.ಟಿ. ರವಿಯವರು ನೇಕಾರ ಸಮುದಾಯದ ಏಳಿಗೆಗೆ 20ಲಕ್ಷರೂ. ಅನುದಾನ ನೀಡಿದ್ದಾರೆ. ಮೆಡಿಕಲ್ ಕಾಲೇಜು ಸೇರಿದಂತೆ ಅನೇಕ ಅಭಿವೃದ್ದಿ ಕಾರ್ಯಗಳನ್ನು ಕ್ಷೇತ್ರದಲ್ಲಿ ಮಾಡಿದ್ದಾರೆ ಎಂದು ತಿಳಿಸಿದರು.

ನೇಕಾರ ಅಭಿವೃದ್ದಿ ನಿಗಮದ ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ಪುಷ್ಪಾರಾಜೇಂದ್ರ, ಖಜಾಂಚಿನವೀನ್ ಬಿಲ್ಲಾಳ್, ಕಾರ್ಯದರ್ಶಿ ದಯಾನಂದ್ ಶೆಟ್ಟಿಗಾರ್, ಜಿಲ್ಲಾ ಸಹ ಕಾರ್ಯದರ್ಶಿ ಬಿ.ಎಂ. ಕುಮಾರ್ ಹಾಜರಿದ್ದರು.