ತೆಲುಗು ಚಿತ್ರರಂಗದ ಸ್ಟಾರ್ ನಟಿ ಸಮಂತಾ ರುತ್ ಪ್ರಭು ಅವರು ನಟನೆಯಿಂದ ದೀರ್ಘ ಬ್ರೇಕ್ ಪಡೆಯುತ್ತಿದ್ದಾರೆ.
ಸಮಂತಾ ಕೈಯಲ್ಲಿ ಸದ್ಯ ತೆಲುಗಿನ ಖುಷಿ ಮತ್ತು ಸಿಟಾಡೆಲ್ ಸಿನಿಮಾಗಳು ಮಾತ್ರ ಇವೆ. ಈ ಎರಡು ಸಿನಿಮಾಗಳ ಚಿತ್ರೀಕರಣ ಮುಗಿಸಿ ಸ್ಯಾಮ್ ದೀರ್ಘ ಬ್ರೇಕ್ ಪಡೆಯುತ್ತಿದ್ದಾರೆ. ಸಮಂತಾ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಮಯೋಸಿಟಿಸ್ ಸಮಸ್ಯೆ ಇರುವ ಬಗ್ಗೆ ಸಮಂತಾ ಈಗಾಗಲೇ ಬಹಿರಂಗ ಪಡಿಸಿದ್ದಾರೆ. ಚಿಕಿತ್ಸೆ ಪಡೆಯುತ್ತಲೆ ಸಮಂತಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ವರ್ಕೌಟ್, ಶೂಟಿಂಗ್ ಅಂತ ಬ್ಯುಸಿಯಾಗಿರುವ ಸಮಂತಾ ಆನಾರೋಗ್ಯದಿಂದ ಹೊರಬರಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ. ಹಾಗಾಗಿ ಬ್ರೇಕ್ ಪಡೆಯಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
ತೆಲುಗಿನಲ್ಲಿ ವಿಜಯ್ ದೇವರಕೊಂಡ ಜೊತೆ ನಟಿಸುತ್ತಿರುವ ಖುಷಿ ಸಿನಿಮಾದ ಶೂಟಿಂಗ್ ಬಹುತೇಕ ಮುಕ್ತಾಯವಾಗಿದೆ. ಕೆಲವೇ ದಿನಗಳಲ್ಲಿ ಶೂಟಿಂಗ್ ಮುಗಿಸುತ್ತಿದ್ದಾರೆ. ಇನ್ನೂ ಸಿಟಾಡೆಲ್ ಶೂಟಿಂಗ್ ಕೂಡ ಮುಕ್ತಾಯದ ಹಂತದಲ್ಲಿದೆ. ಈ ಎರಡು ಸಿನಿಮಾಗಳು ಬಿಟ್ಟರೆ ಸಮಂತಾ, ಬೇರೆ ಯಾವುದೇ ಸಿನಿಮಾ ಅನೌನ್ಸ್ ಮಾಡಿಲ್ಲ. ಈ ಹಿಂದೆ ಒಪ್ಪಿಕೊಂಡ ಕೆಲ ಚಿತ್ರಗಳಿಗೆ ಸಂಬಂಧಿಸಿದ ಅಡ್ವಾನ್ಸ್ ಹಣವನ್ನೂ ಸಹ ನಿರ್ಮಾಪಕರಿಗೆ ವಾಪಾಸ್ ನೀಡಿದ್ದಾರೆ ಎಂದು ವರದಿಯಾಗಿದೆ.










