ಮದುವೆಯಾದ ಎರಡೇ ಗಂಟೆಯಲ್ಲಿ ಪತ್ನಿಗೆ ತಲಾಖ್ ಕೊಟ್ಟ ಪತಿ…

37
firstsuddi

ಲಕ್ನೋ: ವ್ಯಕ್ತಿಯೊಬ್ಬ ಮದುವೆಯಾದ ಎರಡೇ ಗಂಟೆಯಲ್ಲಿ ತನ್ನ ಪತ್ನಿಗೆ ತಲಾಖ್ ನೀಡಿದ ಪ್ರಕರಣ ಉತ್ತರಪ್ರದೇಶದ ಆಗ್ರಾದಲ್ಲಿ ನಡೆದಿದೆ.

ಈ ಬಗ್ಗೆ ವಧುವಿನ ಸಹೋದರ ಕಮ್ರಾನ್ ವಾಸಿ ಮಾಹಿತಿ ಹಂಚಿಕೊಂಡಿದ್ದಾರೆ. ತನ್ನ ಇಬ್ಬರು ಸಹೋದರಿಯರನ್ನು ಆಗ್ರಾದ ಫತೇಹಾಬಾದ್‍ನಲ್ಲಿ ಒಂದೇ ದಿನ ಮದುವೆ ಮಾಡಲಾಯಿತು. ಈ ವೇಳೆ ಒಬ್ಬಳು ಸಹೋದರಿ ತನ್ನ ಪತಿಯೊಂದಿಗೆ ತೆರಳಿದ್ದಾಳೆ. ಆದರೆ ಮತ್ತೊಬ್ಬಳು ಪತಿ ಮೊಹಮ್ಮದ್ ಆಸಿಫ್ ವರದಕ್ಷಿಣೆಯ ಕಾರಿಗಾಗಿ ಗಲಾಟೆ ತೆಗೆದಿದ್ದಾನೆ ಎಂದು ಆರೋಪಿಸಿದ್ದಾರೆ.

ಅಲ್ಲದೇ ಅವನ ಕುಟುಂಬ ಸಹ ಈಕೆಯ ಪೋಷಕರು ಆಸಿಫ್‍ಗೆ ಕಾರು ಕೊಡುವುದಾಗಿ ಭರವಸೆ ನೀಡಿದ್ದರು. ಈಗ ಸ್ಥಳದಲ್ಲೇ ಕಾರು ಕೊಡಿಸಿ ಇಲ್ಲವೇ 5 ಲಕ್ಷ ರೂಪಾಯಿ ನೀಡಬೇಕು ಎಂದು ಗಲಾಟೆ ಮಾಡಿದ್ದಾರೆ. ಇದಕ್ಕೆ ಹೆಣ್ಣಿನ ಕುಟುಂಬದವರು ಅಲ್ಪಾವಧಿಯಲ್ಲಿ ಹಣದ ವ್ಯವಸ್ಥೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದಾದ ಬಳಿಕ ಆಸಿಫ್ ತಲಾಖ್ ನೀಡಿ ತೆರಳಿದ್ದಾನೆ

ಈ ಸಂಬಂಧ ಕಮ್ರಾನ್ ವಾಸಿ ದೂರು ದಾಖಲಿಸಿದ್ದಾರೆ. ಆಸಿಫ್ ಮತ್ತು ಇತರ 6 ಮಂದಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಎಫ್ಐಆರ್ ನಲ್ಲಿ ಹೆಸರಿಸಿರುವ 7 ಮಂದಿಯನ್ನು ಬಂಧಿಸಬೇಕು ಎಂದು ಕಮ್ರಾನ್ ಆಗ್ರಹಿಸಿದ್ದಾರೆ.