ನಟಿ ಅದ್ವಿತಿ- ಅಶ್ವಿತಿ ಶೆಟ್ಟಿಗೆ ಪಿತೃ ವಿಯೋಗ…

91
firstsuddi

ಮಿಸ್ಟರ್ ಆಂಡ್ ಮಿಸೆಸ್ ರಾಮಾಚಾರಿ ನಟಿ ಅದ್ವಿತಿ ಶೆಟ್ಟಿ ಹಾಗೂ ಅಶ್ವಿತಿ ಶೆಟ್ಟಿ ಅವರ ತಂದೆ ನಿಧನರಾಗಿದ್ದಾರೆ.

ಅದ್ವಿತಿ ಶೆಟ್ಟಿ ಅವರ ತಂದೆ ಕೆಲ ದಿನಗಳಿಂದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

ಅಪ್ಪ ನೀನು ಎಲ್ಲೇ ಇದ್ದರೂ ಖುಷಿಯಾಗಿರು ನೆಮ್ಮದಿಯಾಗಿ ಮಲಗು ಎಂದು ಅಶ್ವಿತಿ ಶೆಟ್ಟಿ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ಅಪ್ಪ ದಯವಿಟ್ಟು ಮರಳಿ ಬಾ, ಅಪ್ಪ ಓಂ ಶಾಂತಿ ಎಂದು ಅದ್ವಿತಿ ಶೆಟ್ಟಿ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.

ಅದ್ವಿತಿ- ಅಶ್ವಿತಿ ಶೆಟ್ಟಿ ಇಬ್ಬರು ಟ್ವಿನ್ಸ್ ಮಕ್ಕಳ ವೃತ್ತಿ ರಂಗದ ಗೆಲುವಿಗೆ ತಂದೆ ಸದಾ ಪ್ರೋತ್ಸಾಹ ನೀಡುತ್ತಿದ್ದರು. ತಂದೆ ನಿಧನ ಇದೀಗ ನಟಿ ಅದ್ವಿತಿ ಕುಟುಂಬಕ್ಕೆ ಶಾಕ್ ಕೊಟ್ಟಿದೆ. ಅದ್ವಿತಿ ತಂದೆಯ ನಿಧನಕ್ಕೆ ಆಪ್ತರು, ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ.