ಟೆಲ್ ಆವೀವ್: ದಕ್ಷಿಣ ಗಾಜಾದಲ್ಲಿರುವ ಆಸ್ಪತ್ರೆಯ ಮೇಲೆ ಬಾಂಬ್ ದಾಳಿ ನಡೆದಿದ್ದು, ಘಟನೆಯಲ್ಲಿ 500ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಇಸ್ರೇಲಿ ವಾಯುದಾಳಿಯಿಂದ ಸ್ಫೋಟ ಸಂಭವಿಸಿದೆ ಎಂದು ಹಮಾಸ್ ಹಿಡಿತದಲ್ಲಿರುವ ಗಾಜಾ ಪಟ್ಟಿಯಲ್ಲಿರುವ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ, ಆದರೆ ಇಸ್ರೇಲಿ ಮಿಲಿಟರಿ ಪ್ಯಾಲೆಸ್ತೀನಿಯನ್ ಇಸ್ಲಾಮಿಕ್ ಜಿಹಾದ್ ಭಯೋತ್ಪಾದಕ ಗುಂಪನ್ನು ದೂಷಿಸಿದೆ.
ಆರೋಗ್ಯ ಸಚಿವಾಲಯದ ವಕ್ತಾರ ಅಶ್ರಫ್ ಅಲ್-ಕುದ್ರಾ ಮಾತನಾ,ಡಿ 500ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ರಕ್ಷಣಾ ಕಾರ್ಯಕರ್ತರು ಇನ್ನೂ ಅವಶೇಷಗಳಿಂದ ದೇಹಗಳನ್ನು ತೆಗೆಯುತ್ತಿದ್ದಾರೆ ಎಂದು ಹೇಳಿದರು. ಗಾಜಾದ ಆರೋಗ್ಯ ಅಧಿಕಾರಿಗಳು ಇಸ್ರೇಲ್‌ನ 11 ದಿನಗಳ ಬಾಂಬ್ ದಾಳಿಯಲ್ಲಿ ಕನಿಷ್ಠ 3,000 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.
ಇತ್ತ ಹಮಾಸ್ ಸಂಘಟನೆ ಈ ದಾಳಿಯನ್ನು ಇಸ್ರೇಲೇ ಮಾಡಿದೆ ಗಾಜಾಪಟ್ಟಿಯಲ್ಲಿ ಇಸ್ರೇಲ್ ಹತ್ಯಾಕಾಂಡವನ್ನೇ ನಡೆಸಿದೆ. ಆಸ್ಪತ್ರೆ ಮೇಲೆ ದಾಳಿ ಮಾಡುವ ಮೂಲಕ ಅಮಾನವೀಯ ವರ್ತನೆ ತೋರಿದೆ ಎಂದು ಆರೋಪಿಸಿದ್ದರೆ, ಇತ್ತ ಇಸ್ರೇಲ್ ಈ ಆರೋಪವನ್ನು ಬಲವಾಗಿ ನಿರಾಕರಿಸಿದೆ. ಇದೊಂದು ಹಮಾಸ್ ಉಗ್ರರೇ ಇಸ್ರೇಲ್‌ನತ್ತ ಹಾರಿ ಬಿಟ್ಟ ರಾಕೆಟೊಂದು ಮಿಸ್ ಫೈರ್ ಆಗಿ ಗಾಜಾ ಪಟ್ಟಿಯ ಆಸ್ಪತ್ರೆ ಮೇಲೆ ಬಿದ್ದಿದೆ. ಇದನ್ನು ನಾವೂ ಮಾಡಿಯೇ ಇಲ್ಲ ಎಂದು ಇಸ್ರೇಲ್ ಹೇಳಿದ್ದು, ಟ್ವಿಟ್ಟರ್‌ನಲ್ಲಿ ವೀಡಿಯೋ ಸಮೇತ ಪೋಸ್ಟ್ ಹಾರಿ ಬಿಟ್ಟಿದೆ.










