ಕೈಲಾಗದ ಶತ್ರುವಿನ ಕೊನೆಯ ಅಸ್ತ್ರವೇ ಅಪಪ್ರಚಾರ ಎಂಬಂತೆ ಕಾಂಗ್ರೆಸ್ ಪಕ್ಷದ ಸೋಲಿನ ಹತಾಶೆ ಪರಾಕಾಷ್ಠೆ ತಲುಪಿದೆ: ಆರ್.ಅಶೋಕ್.

86
firstsuddi

ಬೆಂಗಳೂರು: ಕೈಲಾಗದ ಶತ್ರುವಿನ ಕೊನೆಯ ಅಸ್ತ್ರವೇ ಅಪಪ್ರಚಾರ ಎಂಬಂತೆ ಕಾಂಗ್ರೆಸ್ ಪಕ್ಷದ ಸೋಲಿನ ಹತಾಶೆ ಪರಾಕಾಷ್ಠೆ ತಲುಪಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ.

ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಕೇಸರಿ ಕುಂಕುಮ ಕಂಡರೆ ಭಯಪಡುವ ಕಾಂಗ್ರೆಸ್ ನಾಯಕರ ಕಾಮಾಲೆ ಕಣ್ಣಿಗೆ ಜಗತ್ತೇ ಹಳದಿಯಾಗಿ ಕಾಣುವುದು ಸಹಜ.

ನಿನ್ನೆ ಹೋಳಿ ಹಬ್ಬದ ಪ್ರಯುಕ್ತ ಕೆಮಿಕಲ್ ಮಿಶ್ರಿತ ಬಣ್ಣದಿಂದ ಚರ್ಮದ ಅಲರ್ಜಿ ಸಮಸ್ಯೆ ಆಗುತ್ತದೆ ಎನ್ನುವ ಕಾರಣದಿಂದ ಬೀದರ್ ನಲ್ಲಿ ತಿಲಕ ಬೇಡ ಅಂದಿದ್ದೆ. ಹಿಂದೂ ಸಂಸ್ಕೃತಿ, ಪರಂಪರೆ ಬಗ್ಗೆ ಗೌರವ ನೀಡುವುದನ್ನು ನಾನು ಕಾಂಗ್ರೆಸ್ ಪಕ್ಷದಿಂದ ಕಲಿಯಬೇಕಾಗಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ವಿರೋಧ ಪಕ್ಷದ ನಾಯಕ ಆರ್ ಅಶೋಕ ಅವರು ಹಣೆಗೆ ಹಿರಿಯ ಮುಖಂಡ ವಿಶ್ವನಾಥ್ ಪವಾರ್ ಅವರು ತಿಲಕ ಇಡಲು ಮುಂದಾದಾಗ ಅಶೋಕ ಅವರು ನಿರಾಕರಿಸಿದರ ವಿಡಿಯೋ ಒಂದನ್ನು ಸಾಮಾಜಿಕ ಜಾಣದಲ್ಲಿ ಪೋಸ್ಟ್ ಮಾಡಿ ಬೂಟಾಟಿಕೆಯ ಧಾರ್ಮಿಕತೆ ಎಂದು ವ್ಯಂಗ್ಯವಾಡಿತ್ತು.

ಕಾರ್ಯಕರ್ತರೊಬ್ಬರು ಅಶೋಕ ಅವರಿಗೆ ಹಾರ ಹಾಕಲು ಬಂದಾಗ ಅಶೋಕ ಅವರು ಅದನ್ನು ಹಿರಿಯ ಮುಖಂಡ ಡಾ ವಿಶ್ವನಾಥ್ ಪವಾರ್ ಅವರಿಗೆ ಹಾಕಿದರು. ಈ ವೇಳೆ ಪವಾರ್ ಅವರು ಅಶೋಕ ಅವರ ಹಣೆಗೆ ತಿಲಕ ಇಡಲು ಮುಂದಾಗಿದ್ದು ಅಶೋಕ ಅವರು ನಿರಾಕರಿಸಿದ್ದರು.