ಬಿಜೆಪಿ ಪಕ್ಷದ ನಾಯಕರು ವಕ್ಫ್ ವಿಚಾರವನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ: ಸಿಎಂ.ಸಿದ್ದರಾಮಯ್ಯ.

25

ಬೆಂಗಳೂರು: ಬಿಜೆಪಿಯವರಿಗೆ ವಿಧಾನಸಭಾ ಉಪ ಚುನಾವಣೆಗೆ ಯಾವುದೇ ವಿಷಯಗಳಿಲ್ಲದ ಕಾರಣ ಈ ವಕ್ಫ್ ವಿಚಾರವನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ. ವಿಧಾನಸೌಧದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಕ್ಫ್ ವಿಚಾರದಲ್ಲಿ ಬಿಜೆಪಿಯವರು ರಾಜಕಾರಣ ಮಾಡುತ್ತಿದ್ದಾರೆ. ವಿವಾದ ಇಲ್ಲದೇ ಇರುವುದನ್ನು ವಿವಾದವನ್ನಾಗಿಸಲು ಹೊರಟಿದ್ದಾರೆ. ಬಿಜೆಪಿಯವರಿಗೆ ಯಾವುದೇ ವಿಷಯವಿಲ್ಲ. ಹಾಗಾಗಿ, ಉಪ ಚುನಾವಣೆ ವೇಳೆ ಈ ವಿಷಯವನ್ನು ವಿವಾದವನ್ನಾಗಿಸುತ್ತಿದ್ದಾರೆ ಎಂದರು. ವಕ್ಫ್ ನೋಟಿಸ್ ಬಂದ ರೈತರು ಆತಂಕಗೊಳ್ಳಬೇಕಿಲ್ಲ, ಹಲವಾರು ವರ್ಷಗಳಿಂದ ರೈತರ ಸ್ವಾಧೀನದಲ್ಲಿರುವ ಜಮೀನನ್ನು ಖಾಲಿ ಮಾಡಿಸುವುದಿಲ್ಲ ಎಂದು ಸಿಎಂ ಭರವಸೆ ನೀಡಿದರು.