ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್‍ಬಾಸ್ ಕನ್ನಡ ಸೀಸನ್ 8ರ ವಿನ್ನರ್ ಮಂಜು ಪಾವಗಡ.

34

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 8ರ ವಿಜೇತ ಮಂಜು ಪಾವಗಡ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಂಜು ತಮ್ಮ ಹುಟ್ಟೂರಾದ ಪಾವಗಡದಲ್ಲೇ ಮದುವೆಯಾಗಿದ್ದಾರೆ. ಮದುವೆಗೆ ನಟಿ ಶುಭಾ ಪೂಂಜಾ ಸೇರಿ ಅನೇಕರು ಭಾಗಿ ದಂಪತಿಗಳಿಗೆ ಶುಭ ಹಾರೈಸಿದರು. ಆಪ್ತರು ಹಾಗೂ ಹಿರಿಯರ ಸಮ್ಮುಖದಲ್ಲಿ ಮಂಜು ಮದುವೆ ಆಗಿದ್ದಾರೆ. ಮಂಜು ತಮ್ಮ ಹುಟ್ಟೂರಾದ ಪಾವಗಡದಲ್ಲೇ ನಂದಿನಿ ಜೊತೆ ವಿವಾಹವಾಗಿದ್ದಾರೆ. ಕಾಮಿಡಿ ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಸಿ ಫೇಮಸ್ ಆಗಿದ್ದ ಮಂಜು ಪಾವಗಡ ಅವರು ಬಿಗ್ ಬಾಸ್ ವಿನ್ನರ್ ಆಗಿದ್ದರು. ನಂತರ ಅಂತರಪಟ ಧಾರಾವಾಹಿಯಲ್ಲಿ ಮಂಜು ಪಾವಗಡ ನಟಿಸುತ್ತಿದ್ದಾರೆ. ಇದರ ಜೊತೆಗೆ ಕಲರ್ಸ್ ಕನ್ನಡದ ರಿಯಾಲಿಟಿ ಶೋಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ.