ಹೆಚ್.ಡಿ ಕುಮಾರಸ್ವಾಮಿ ಮಾತು ಕೊಟ್ಟಂತೆ ಕೆಲಸ ಮಾಡಬೇಕು: ಮಧು ಬಂಗಾರಪ್ಪ ಕಿಡಿ.

48

ಶಿವಮೊಗ್ಗ : ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ಭದ್ರಾವತಿಯ ವಿಐಎಸ್‍ಎಲ್ ಕಾರ್ಖಾನೆ ವಿಚಾರದಲ್ಲಿ ಮಾತು ಕೊಟ್ಟಂತೆ ಮರ್ಯಾದೆಯಿಂದ ಕೆಲಸ ಮಾಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಕಿಡಿಕಾರಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಾದ ಮೇಲೆ ಹೆಚ್.ಡಿ ಕುಮಾರಸ್ವಾಮಿ ಏನ್ ಅಂತ ಮಾತು ಕೊಟ್ಟಿದ್ದರು. ಅವರಿಗೆ ಯಾರಾದರು ಕರೆದಿದ್ರಾ. ಅವರು ಈ ರಾಜ್ಯವನ್ನು ಆಳಿದವರು. ಅವರಿಗೆ ಜವಾಬ್ದಾರಿ ಕೊಟ್ಟಿದ್ದಾರೆ ತಾನೆ. ಅದನ್ನು ನಾವು ಹೋಗಿಯೇ ಕೇಳಬೇಕಾ. ಆಂಧ್ರಪ್ರದೇಶಕ್ಕೆ ಉಕ್ಕು ಕಾರ್ಖಾನೆಗೆ ಏಳು ಸಾವಿರ ಕೋಟಿ ರೂಪಾಯಿ ಕೊಡುತ್ತೀರಿ. ಈ ವಿಚಾರದಲ್ಲಿ ಯಾರಾದರೂ ಮಾತನಾಡಬೇಕಾ, ನಾನು ಮಾತನಾಡಿದ ಮೇಲೆಯೇ ಕೆಲಸ ಮಾಡುತ್ತೇನಾ. ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗ್ಯಾರಂಟಿ ಯೋಜನೆಯ ಬಗ್ಗೆ ಮಾತು ಕೊಟ್ಟಂತೆ ನಡೆದುಕೊಂಡಿದ್ದಾರೆ ಎಂದು ಹೇಳಿದರು. ಭದ್ರಾವತಿಗೆ ಬಂದು ಕುಮಾರಸ್ವಾಮಿ ಅವರು ಮಾತು ಕೊಟ್ಟಿದ್ದಾರೆ. ಅದರಂತೆ ಕೆಲಸ ಮಾಡಬೇಕಾಗುತ್ತದೆ. ಇಷ್ಟೇ ನಾವು ಕೇಳಿಕೊಳ್ಳುವುದು. ಅವರ ಮನೆ ಕಾಯುವುದಕ್ಕೆ ಆಗುತ್ತಾ, ವಿಐಎಸ್‍ಎಲ್ ಯಾರಿಗೆ ಬರುತ್ತದೆ. ನಾವು ಕಾರ್ಖಾನೆಗಾಗಿ ಗಣಿ ಭೂಮಿಯನ್ನು ನೀಡಿದ್ದೇವೆ. ಅದನ್ನ ಎಲ್ಲಿ ಉಪಯೋಗ ಮಾಡಿಕೊಂಡಿದ್ದೀರಿ. ಕರೆಯದೆ ಬಂದು ಹೇಳಿಕೆ ಕೊಟ್ಟು ಹೋದ್ರಲ್ಲ, ಯಾರು ಕರೆಯುತ್ತಾರೆ, ಏನು ಮಾತನಾಡುತ್ತಿದ್ದೀರಿ ನೀವು ಎಂದು ಪ್ರಶ್ನಿಸಿದರು. ಎಲ್ಲದಕ್ಕೂ ಕರೆಯಬೇಕು ಅಂತಾರಲ್ಲ, ಸಂಸದರು ಜೊತೆಗೆ ಇದ್ದರಲ್ಲ, ಅವರು ಏನ್ ಮಾಡ್ತಾ ಇದ್ದರಂತೆ. ಶರಾವತಿ ಸಂತ್ರಸ್ತರು ಎಲ್ಲ ಚೆನ್ನಾಗಿ ಸ್ಥಳಾಂತರವಾದ ಮೇಲೆ ಇಲ್ಲಿ ಬಂದುಬಿಟ್ಟು ನಾವು ಮಾಡಿದ್ದೇವೆ ಎನ್ನುತ್ತಿದ್ದಾರೆ. ಹೇಳಿಕೊಂಡು ಹೋಗಲಿ, ಅದನ್ನೆಲ್ಲಾ ಜನರು ನೋಡುತ್ತಾರೆ ಎಂದು ಹೇಳಿದರು.