ಮೂಡಿಗೆರೆ: ಬಿಳುಗುಳ  ಸಾರ್ವಜನಿಕ ಗಣಪತಿ ಸಮಿತಿ ವತಿಯಿಂದ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ.

32
ಮೂಡಿಗೆರೆ: ಇಂದು ಬಿಳುಗುಳದಲ್ಲಿ ಸಾರ್ವಜನಿಕ ಮಹಾಗಣಪತಿ ಸಮಿತಿ ವತಿಯಿಂದ ಮಹಿಳೆಯರಿಗೆ   ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಗ್ರಾಮದ ಮಹಿಳೆಯರು  ಭಾಗವಹಿಸಿ  ರಂಗೋಲಿ ಸ್ಪರ್ಧೆಯನ್ನು ಯಶಸ್ವಿಗೊಳಿಸಿದರು . ಭಾಗವಹಿಸಿದ ಎಲ್ಲಾ ಸ್ಪರ್ದಾಳುಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ    ಪ್ರಥಮ ದ್ವಿತೀಯ ತೃತೀಯ ಆಕರ್ಷಕ ಬಹುಮಾನಗಳು ಹಾಗೂ ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೂ ಸಮಾಧಾನಕರ ಬಹುಮಾನ ವಿತರಿಸುವ ಕುರಿತು ಸಮಿತಿಯವರು ತಿಳಿಸಿರುತ್ತಾರೆ . ರಂಗೋಲಿಯ ತೀರ್ಪುಗಾರರಾಗಿ ಶಿಕ್ಷಕರದ ಶ್ರೀಮತಿ ವಿದ್ಯಾ ಹಾಗೂ ಶ್ರೀಮತಿ ಅಂಕಿತ ಇವರು ಸಹಕರಿಸಿದರು. ಹಾಗೂ ಇದೇ ಸಂದರ್ಭದಲ್ಲಿ ಹೆಸಗಲ್ ಸಂಜೀವಿನಿ ಒಕ್ಕೂಟದ ಸಂಘದ ಮಹಿಳೆಯರು ತಾವು ಉತ್ಪಾದಿಸಿದ ಉತ್ಪನ್ನಗಳನ್ನು ಮಾರಾಟ ಮಾಡಿದ್ದು, ರಂಗೋಲಿ ಪುಡಿ, ಉಪ್ಪಿನಕಾಯಿ, ಹಪ್ಪಳ  ಸೇರಿದಂತೆ ಇತರ ಉತ್ಪನ್ನಗಳನ್ನು ಮಾರಾಟ ಮಾಡಿದರು. ಈ ಸಂದರ್ಭದಲ್ಲಿ ಗಣಪತಿ ಸೇವಾ ಸಮಿತಿ ಅಧ್ಯಕ್ಷರಾದ ಅರವಿಂದ ಸಮಿತಿಯ ಎಲ್ಲಾ ಸರ್ವ ಸದಸ್ಯರುಗಳು ಹಾಗೂ ಗ್ರಾಮದ ಮಹಿಳೆಯರು ಇದ್ದರು.