ಹಿಪ್ಪುನೇರಳೆ ಗಿಡಕ್ಕೆ ದುಷ್ಕರ್ಮಿಗಳಿಂದ ವಿಷ ಸಿಂಪಡಣೆ…

538
firstsuddi

ತುಮಕೂರು: ಹಿಪ್ಪುನೇರಳೆ ಗಿಡಗಳಿಗೆ ಕಿಡಿಗೇಡಿಗಳು ಕ್ರಿಮಿನಾಶಕ ಸಿಂಪಡಿಸಿದ ಪರಿಣಾಮ ಬೆಳೆ ಸಂಪೂರ್ಣ ನಾಶವಾಗಿರುವ ಘಟನೆ ಮಧುಗಿರಿ ತಾಲೂಕಿನ ಗುಟ್ಟೆ ಗ್ರಾಮದಲ್ಲಿ ನಡೆದಿದೆ.  ಆಂಜನಪ್ಪ ಎಂಬುವವರು ಸುಮಾರು 2 ಎಕರೆ ಪ್ರದೇಶದಲ್ಲಿ ಹಿಪ್ಪು ನೇರಳೆ ಗಿಡ  ಬೆಳೆದಿದ್ದು , ತನ್ನ ಜಮೀನಿನ ಗಿಡಗಳಿಗೆ ದುಷ್ಕರ್ಮಿಗಳೇ ವಿಷ ಸಿಂಪಡಿಸಿವೆ ಎಂದು ರೈತ ಆರೋಪ ಮಾಡಿದ್ದಾರೆ. ಸುಮಾರು 2 ಲಕ್ಷ ರೂಪಾಯಿ ನಷ್ಟವಾಗಿದ್ದು,ರೈತ ಬೆಳೆ ನಷ್ಟದಿಂದ ಕಂಗಾಲಾಗಿದ್ದು, ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.