ಮೈತ್ರಿ ಸರ್ಕಾರ ಬಿದ್ದ ಮೇಲೆ ನಾವು ಸರ್ಕಾರ ರಚನೆ ಮಾಡುತ್ತೇವೆ.- ಆರ್.ಅಶೋಕ್…

763
firstsuddi

ಬೆಂಗಳೂರು: ಆರ್.ಅಶೋಕ್ ಮಾತನಾಡಿ ಯಾರು ವಿಲನ್ ಎಂದು ರಾಜ್ಯದ ಜನರಿಗೆ ಗೊತ್ತಿದೆ. ಕಾಂಗ್ರೆಸ್ ಪಕ್ಷದವರೇ ವಿಲನ್ ರೀತಿ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರಿಂದಲೇ ಸರ್ಕಾರ ಬೀಳುತ್ತದೆ. ಮೈತ್ರಿ ಸರ್ಕಾರ ಬಿದ್ದ ಮೇಲೆ ನಾವು ಸರ್ಕಾರ ರಚನೆ ಮಾಡುತ್ತೇವೆ. ಯಾರು ವಿದೇಶದಿಂದ ಆಟವಾಡುತ್ತಿದ್ದಾರೆ. ಯಾರು ದೇಶದಲ್ಲಿ ಇದ್ದುಕೊಂಡು ಆಟವಾಡುತ್ತಿದ್ದಾರೆ ಎಂಬುದು ತಿಳಿದಿದೆ. ರಾಜ್ಯದ ಸಮ್ಮಿಶ್ರ ಸರ್ಕಾರದಲ್ಲಿ ಬಿಕ್ಕಟ್ಟು ಉಂಟಾಗಿದೆ.ಬಿಜೆಪಿ ಪಕ್ಷದಿಂದ ಈ ಸರ್ಕಾರ ಬೀಳುತ್ತಿಲ್ಲ. ಸುಮ್ಮನೆ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಹೇಳಿದ್ದಾರೆ.